ಮುಂಬೈ

ಬ್ಯಾಂಕ್‌ ನೌಕರನಿಗೆ ಶಿವಸೇನೆ ನಾಯಕನಿಂದ ಕಪಾಳ ಮೋಕ್ಷ

Pinterest LinkedIn Tumblr

Shiv Sena slap-700ಯವತ್ಮಾಲ್‌ : ಅತ್ಯಂತ ಆಘಾತಕಾರಿ ಪ್ರಕರಣವೊಂದರಲ್ಲಿ ಶಿವಸೇನೆಯ ನಾಯಕ ಪ್ರವೀಣ್‌ ಶಿಂಧೆ ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯಲ್ಲಿ ಕರ್ತವ್ಯ ನಿರತನಾಗಿದ್ದ ಬ್ಯಾಂಕ್‌ ನೌಕರನಿಗೆ ಸಿಟ್ಟಿನ ಭರದಲ್ಲಿ ಕಪಾಳ ಮೋಕ್ಷ ಮಾಡಿರುವುದು ಕ್ಯಾಮೆರಾದಲ್ಲಿ ದಾಖಲಾಗಿದ್ದು ಈ ವಿಡಿಯೋ ಚಿತ್ರಿಕೆ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

WATCH (15/6/16): Local Shiv Sena leaders slap a bank employee in Yavatmal (Maharashtra)https://t.co/oQOPEEaToa

— ANI (@ANI_news) June 16, 2016
ಜಿಲ್ಲಾ ಪರಿಷತ್‌ ಸದಸ್ಯರಾಗಿರುವ ಶಿಂಧೆ ಅವರು ಕಪಾಳ ಮೋಕ್ಷ ಮಾಡಿರುವುದು ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾದ ನೌಕರನಿಗೆ ಎಂದು ಗೊತ್ತಾಗಿದೆ.

ಯವತ್ಮಾಲ್‌ ಜಿಲ್ಲೆಯಲ್ಲಿನ ಬ್ಯಾಂಕಿನ ಶಾಖೆಗಳಲ್ಲಿ ಸಾಲ ಮಂಜೂರಾತಿಗೆ ಸಂಬಂಧಿಸಿದಂತೆ ಬ್ಯಾಂಕ್‌ ನೌಕರನೊಂದಿಗೆ ಜೋರು ಜೋರಾಗಿ ಮಾತನಾಡುತ್ತಾ ಸಿಟ್ಟಿನ ಪರಾಕಾಷ್ಠೆಯಲ್ಲಿ ಶಿಂಧೆ ಆತನಿಗೆ ಕಪಾಳ ಮೋಕ್ಷ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ವಿಚಿತ್ರವೆಂದರೆ ಬಹುತೇಕ ಇದೇ ವೇಳೆ ಶಿವಸೇನೆಯ ಮತ್ತೋರ್ವ ನಾಯಕ, ಶಾಸಕ ಸದಾ ಸರವಣಕರ್‌ ದಾದರ್‌ನಲ್ಲಿ ಮಹಿಳೆಯೊಬ್ಬಳಿಗೆ ಹೊಡೆಯುತ್ತಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ.

ಸರವಣಕರ್‌ ಅವರು ದಾದರ್‌ನ ನಿವಾಸಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಮಹಿಳೆಯೋರ್ವರಿಗೆ ಹೊಡೆದಿರುವುದು ವಿಡಿಯೋದಲ್ಲಿ ದಾಖಲಾಗಿತ್ತು; ಆದರೆ ಮಹಿಳೆಯ ಮುಖ ಸರಿಯಾಗಿ ವಿಡಿಯೋದಲ್ಲಿ ಕಂಡುಬರಲಿಲ್ಲ. ಆದರೂ ಆ ವಿಡಿಯೋವನ್ನು ಸಾಮಾಜಿಕ ಜಾಲ ತಾಣಗಳಿಗೆ ಅಪ್‌ಲೋಡ್‌ ಮಾಡಲಾಗಿದೆ.
-ಉದಯವಾಣಿ

Comments are closed.