ಕರ್ನಾಟಕ

ಶೇ 40% ರಷ್ಟು ದಂತ ,ವೈದ್ಯಕೀಯ ಸರ್ಕಾರಿ ಸೀಟು ಖಚಿತ

Pinterest LinkedIn Tumblr

jayaಬೆಂಗಳೂರು, ಜೂ.7-ದಂತ ಹಾಗೂ ವೈದ್ಯಕೀಯ ಕಾಲೇಜಿನಿಂದ ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದ ಶೇ.40 ರಷ್ಟು ಸೀಟುಗಳನ್ನು ಪಡೆದುಕೊಳ್ಳುವುದು ಖಚಿತ. ಈ ವಿಷಯದಲ್ಲಿ ಯಾವುದೇ ರಾಜೀ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕಾಲೇಜುಗಳು ಈವರೆಗೂ ಶೇ.40ರಷ್ಟು ಸೀಟನ್ನು ಬಿಟ್ಟುಕೊಡುವ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಈಗಾಗಲೇ ಸ್ವಾಯತ್ತ ವಿಶ್ವವಿದ್ಯಾನಿಲಯಗಳ ಜೊತೆ ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆದಿದೆ. ಮುಂದುವರೆದು ಸರ್ಕಾರ ಕಾನೂನು ತಜ್ಞರು ಹಾಗೂ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಜೊತೆ ಸಮಾಲೋಚನೆ ನಡೆಸುತ್ತಿದೆ ಎಂದು ಹೇಳಿದರು.

ರೆಸಾರ್ಟ್ ರಾಜಕೀಯ ಗೊತ್ತಿಲ್ಲ: ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಪಕ್ಷೇತರ ಶಾಸಕರ ಬೆಂಬಲ ನೀಡುತ್ತಾರೆ. ಇದರ ಹೊರತಾಗಿ ನಾವು ಯಾರನ್ನೂ ರೆಸಾರ್ಟ್‌ಗೆ ಕರೆದುಕೊಂಡು ಹೋಗಿಲ್ಲ ಎಂದು ಜಯಚಂದ್ರ ಹೇಳಿದರು. ಪಕ್ಷೇತರ ಶಾಸಕರು ಸ್ವಂತ ಕೆಲಸದ ಮೇಲೆ ಮುಂಬೈಗೆ ತೆರಳಿದ್ದಾರೆ. ನಮ್ಮ ಶಾಸಕರು ಕೂಡ ಖಾಸಗಿಯಾಗಿ ಭೇಟಿ ನೀಡಿದ್ದಾರೆ. ಪಕ್ಷೇತರ ಶಾಸಕರ ಪ್ರವಾಸಕ್ಕೂ, ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ರಾಜ್ಯಸಭೆಯ ನಮ್ಮ 3ನೆ ಅಭ್ಯರ್ಥಿ ಗೆಲ್ಲಲು 12 ಮತಗಳು ಬೇಕಿದೆ. ಪಕ್ಷೇತರ ಸದಸ್ಯರು ಸಾಮಾನ್ಯವಾಗಿ ಆಡಳಿತಾರೂಢ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೆ. ಹೀಗಾಗಿ ನಮ್ಮ ಅಭ್ಯರ್ಥಿಗಳು ಗೆಲಲ್ಲಿದ್ದಾರೆ ಎಂದು ಹೇಳಿದರು.

ಶ್ಯಾಂಭಟ್ ನೇಮಕಾತಿಗೆ ಕೊಕ್ಕೆ: ಶ್ಯಾಂಭಟ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇಮಿಸಲು ರಾಜ್ಯಸರ್ಕಾರ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೆಲ ಪ್ರಸಂಗಗಳನ್ನು ಕೇಳಿ ರಾಜ್ಯಪಾಲರು ಕೆಲ ಸ್ಪಷ್ಟನೆಗಳನ್ನು ಕೇಳಿದ್ದಾರೆ ಎಂದು ಜಯಚಂದ್ರ ಹೇಳಿದರು. ಈ ಮೂಲಕ ರಾಜ್ಯಸರ್ಕಾರದ ಮತ್ತೊಂದು ನೇಮಕಾತಿಗೂ ರಾಜ್ಯಪಾಲರು ಅಡ್ಡಗಾಲು ಹಾಕಿದ್ದಾರೆ. ಬೆಂಗಳೂರು ವಿವಿ ವಿಭಜನೆ: ಬೆಂಗಳೂರು ವಿವಿಯನ್ನು ಈಗಾಗಲೇ ವಿಭಜಿಸಲಾಗಿದೆ. ಮೂರು ವಿಭಾಗಗಳಾಗಿದ್ದು, ಉತ್ತರ ವಿಭಾಗಕ್ಕೆ ಮಂಗಳೂರು ವಿವಿ ಕುಲಸಚಿವ ಕೆಂಪರಾಜು ಅವರನ್ನು, ಕೇಂದ್ರ ವಿಭಾಗಕ್ಕೆ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರೊಫೆಸರ್ ಜಾರ್ಫೆಡ್ ಅವರನ್ನು ಕೋಶಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.

Comments are closed.