ಕರ್ನಾಟಕ

ಮುಂಬೈನಿಂದ ಶಿರ‌ಡಿಗೆ ಶಾಸಕರ ದೌಡು

Pinterest LinkedIn Tumblr

congress_logo

ಬೆಂಗಳೂರು, ಜೂ. ೭- ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರೊಂದಿಗೆ ಮುಂಬೈಯಲ್ಲಿ ಮೊಕ್ಕಾಂ ಮಾ‌ಡಿರುವ 6 ಮಂದಿ ಪಕ್ಷೇತರ ಶಾಸಕರು ಇಂದು ರಾತ್ರಿ ಇಲ್ಲವೇ ನಾಳೆಯೊಳಗೆ ನಗರಕ್ಕೆ ಹಿಂತಿರುಗಲಿದ್ದಾರೆ.
ಶಾಸಕರ `ಹೈಜಾಕ್’ ಮಾಡುವ ವಿಚಾರವನ್ನು ಕೇಂದ್ರ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿರುವುದನ್ನು ಮನಗಂಡು ಮುಂಬೈಯಲ್ಲಿ ಬೀಡುಬಿಟ್ಟಿದ್ದ ಶಾಸಕರು ನೆಪ ಮಾತ್ರಕ್ಕೆ ಯಾತ್ರೆ ಕೈಗೊಂಡಿದ್ದಾರೆ.
ಕೆಲ ಶಾಸಕರು ಶಿರಡಿ ಸಾಯಿಬಾಬಾನ ದರ್ಶನಕ್ಕೆ ಪಯಣ ಬೆಳೆಸಿದರೆ ಮತ್ತೆ ಕೆಲವರು ಮುಂಬೈನಗರ ಪ್ರದಕ್ಷಿಣೆ ಮಾಡಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.
ಶಾಸಕರ ಹೈಜಾಕ್ ಸುದ್ದಿ ವರದಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಬೆಚ್ಚಿಬಿದ್ದಿದ್ದಾರೆ. ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷದ ಶಾಸಕರನ್ನು ಮುಂಬೈಗೆ ಕರೆದೊಯ್ದಿದ್ದ ಕಾಂಗ್ರೆಸ್‌ನ ಮೂರು ಮಂದಿ ಶಾಸಕರು ಉಲ್ಟಾ ಹೊಡೆದು ಪಕ್ಷೇತರ ಶಾಸಕರು ದೇವರ ದರ್ಶನಕ್ಕೆ ಮುಂಬೈಗೆ ಬಂದಿದ್ದಾರೆ ಎಂದು ರಾಗ ಬದಲಿಸಿದ್ದಾರೆ.
ಕಾಂಗ್ರೆಸ್ ಶಾಸಕರಾದ ಎಸ್.ಟಿ. ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್ ಜೊತೆ ಪಕ್ಷೇತರ ಶಾಸಕರಾದ ಸುಬ್ಬಾರೆಡ್ಡಿ, ಅರವಿಂದ ಪಾಟೀಲ್, ಗುರು ಪಾಟೀಲ್,, ಮಾಂಕಾಳ ಸುಬ್ಬ ವೈದ್ಯ, ಅಶೋಕ್ ಖೇಣಿ, ಸತೀಶ್ ಸೈಲ್, ನಾಗೇಂದ್ರ ಅವರುಗಳು ಮುಂಬೈನಲ್ಲಿದ್ದು, ಇವರೆಲ್ಲಾ ಇಂದು ಸಂಜೆ ಇಲ್ಲವೆ ನಾಳೆ ನಗರಕ್ಕೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ.

Comments are closed.