ಕರ್ನಾಟಕ

ಮಾಂಸದೂಟ ಸೇವಿಸಿ 70 ಜನರು ಅಸ್ವಸ್ಥ

Pinterest LinkedIn Tumblr

mಹಾಸನ,: ಮಾಂಸದೂಟ ಸೇವಿಸಿದ್ದ 70 ಜನ ಅಸ್ವಸ್ಥರಾದ ಘಟನೆ ಸಕಲೇಶಪುರ ತಾಲ್ಲೂಕಿನ ಬಿಡರಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೂರು ವರ್ಷಕ್ಕೊಮ್ಮೆ ಗ್ರಾಮದೇವಿಯ ಜಾತ್ರೆ ನಡೆಸಲಾಗುತ್ತಿದ್ದು, ಇದರ ವಿಶೇಷವಾಗಿ ಪೂಜೆಯ ಬಳಿಕ ಗ್ರಾಮಸ್ಥರು ಮಾಂಸದಡುಗೆಯನ್ನು ಮಾಡಿರುತ್ತಾರೆ. ಶನಿವಾರ ಜಾತ್ರೆ ಬಳಿಕ ಸಿದ್ಧಪಡಿಸಲಾಗಿದ್ದ 80 ಕೆಜಿ ಕೋಳಿ ಮಾಂಸದೂಟವನ್ನು 300ರಿಂದ 400 ಜನರು ಸೇವಿಸಿದ್ದರು. ಬಳಿಕ ಅವರಲ್ಲಿ 70 ಜನರು ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಕೆಲವರನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಶುಚಿತ್ವದ ಕೊರತೆ ಅಥವಾ ಕಲುಷಿತ ನೀರು ಸೇವನೆ ಘಟನೆಗೆ ಕಾರಣವಿರಬಹುದು. ಎಲ್ಲರೂ ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಮತ್ತು ಶಾಸಕರಾದ ಹೆಚ್.ಡಿ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Comments are closed.