ಕರ್ನಾಟಕ

ಮಳೆ ಬಂದರೆ ಯಮಲೂರು ಕೆರೆಯಲ್ಲಿ ಉಕ್ಕುವ ನೊರೆ

Pinterest LinkedIn Tumblr

lake1ಬೆಂಗಳೂರು: ಮಳೆ ಬಂದರೆ ಸಾಕು ಯಮಲೂರು ಕೆರೆಯಲ್ಲಿ ಬಿಳಿ ನೊರೆ ಉಕ್ಕಲು ಆರಂಭವಾಗುತ್ತದೆ. ಹೀಗಾಗುವಾಗ ಇಲ್ಲಿನ ನಿವಾಸಿಗಳು ಮನೆಯಿಂದ ಹೊರಗೆ ಹೊರಡುವುದೇ ಇಲ್ಲ.

ಬೆಳ್ಳಂದೂರು ಕೆರೆಯಂತೆಯೇ ಇಲ್ಲಿ ನೊರೆ ಉಕ್ಕುತ್ತಿದ್ದು, ರಸ್ತೆಗೆ ಹರಡಿಕೊಳ್ಳುತ್ತದೆ. ಇದು ವಾಹನ ಸಂಚಾರ ದಟ್ಟಣೆಗೂ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿಂದ ಹೊರಹೊಮ್ಮುತ್ತಿರುವ ದುರ್ವಾಸನೆಯಿಂದ ಉಸಿರಾಡಲೂ ಕಷ್ಟವಾಗುತ್ತಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಬೆಳ್ಳಂದೂರು ಕೆರೆಯ ಸಮೀಪದಲ್ಲೇ ಇರುವ ಯಮಲೂರು ಕೆರೆಗೂ ತ್ಯಾಜ್ಯಗಳನ್ನು ಹರಿಯಬಿಡಲಾಗುತ್ತಿದೆ. ಕೆರೆಯ ನೀರಿನ ಮೇಲ್ಮೈನಲ್ಲಿ ಅಮೋನಿಯಾ ಮತ್ತು ಪೋಸ್ಪೇಟ್ ಸಂಗ್ರಹವಾಗಿರುವುದೇ ಈ ನೊರೆಯುಂಟಾಗುಲು ಕಾರಣ.

ಈ ಕೆರೆಯ ಸಮಸ್ಯೆ ಪರಿಹರಿಸುವುದಾಗಿ ಕಳೆದ ವರ್ಷ ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಾಗರಿಕರಿಗೆ ಭರವಸೆ ನೀಡಿತ್ತು. ಆದರೆ, ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲೇ ಇಲ್ಲ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

Comments are closed.