ದೋಹ(ಪಿಟಿಐ): ಗಲ್ಫ್ ರಾಷ್ಟ್ರಗಳ ಭೇಟಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾನುವಾರ ಇಲ್ಲಿ ಕತಾರ್‌ನ ಉದ್ಯಮಿಗಳ ಜತೆ ದುಂಡು ಮೇಜಿನ ಸಭೆ ನಡೆಸಿ, ಭಾರತದಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇಲ್ಲಿನ ಉದ್ಯಮಿಗಳಿಗೆ ಆಹ್ವಾನ ನೀಡಿದರು.
‘ಭಾರತದಲ್ಲಿ ವಿಫುಲ ಅವಕಾಶಗಳಿವೆ. ನಾನು ನಿಮಗೆ ವೈಯಕ್ತಿಕವಾಗಿ ಆಹ್ವಾನ ನೀಡುತ್ತಿದ್ದೇನೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ’ ಎಂದು ಮೋದಿ ಅವರು ತಮ್ಮ ವಿದೇಶಿ ಭೇಟಿಯ ಎರಡನೇ ದಿನ ನಡೆದ ಸಭೆಯಲ್ಲಿ ಹೇಳಿದರು.
ಕತಾರ್ ಉಧ್ಯಮಿಗಳು ಭಾರತದಲ್ಲಿನ ಆಹಾರ ಉತ್ಪನ್ನ ಸಂಸ್ಕರಣೆ, ರೈಲ್ವೆ ಮತ್ತು ಸೌರ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಅವಕಾಶಗಳಿವೆ ಎಂದು ಹೇಳಿದರು.
ಭಾರತದಲ್ಲಿ ಅತಿದೊಡ್ಡ ಯುವ ಮಾನವ ಸಂಪನ್ಮೂಲವಿದೆ. ಮೂಲಸೌಲಭ್ಯ ವೆಚ್ಚ ಮತ್ತು ಉನ್ನತೀಕರಣ ಹಾಗೂ ಉತ್ಪಾನೆಗೆಗೆ ಒತ್ತು ನೀಡಲಾಗುವುದು ಎಂದರು.
ಜನರು ಉತ್ತಮ ಜೀವನ ನಡೆಸಲು ಪೂರಕವಾಗಿರುವ ‘ಸ್ಮಾರ್ಟ್ ಸಿಟಿ’ ಯೋಜನೆ, ಮೆಟ್ರೊ ಮತ್ತು ನಗರ ತ್ಯಾಜ್ಯ ನಿರ್ವಹಣೆ ಕ್ಷೇತ್ರಗಳಲ್ಲೂ ಹೂಡಿಕೆ ಮಾಡಲು ಅವಕಾಶಗಳಿವೆ ಎಂದರು.
ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ ಅವರು ಶನಿವಾರ ಅಘಾನಿಸ್ಥಾಕ್ಕೆ ಭೇಟಿ ನೀಡಿದ್ದು, ಅಲ್ಲಿಂದ ಕತಾರ್‌ಗೆ ಬಂದಿಳಿದಿದ್ದಾರೆ. ಸ್ವಿಟ್ಜರ್‌ಲೆಂಡ್, ಅಮೆರಿಕ ಮತ್ತು ಮಿಕ್ಸಿಕೊ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ.
Comments are closed.