ಕರ್ನಾಟಕ

ವಾಕೊ ವಲ್ರ್ಡ್ ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಚ್ಯಾಂಪಿಯನ್‍ಷಿಪ್‍ಗೆ ಮೈಸೂರಿನ ಬಾಲಕಿ ಆಯ್ಕೆ

Pinterest LinkedIn Tumblr

diya

ಮೈಸೂರು: ಕರಾಟೆಯಲ್ಲಿ 2ನೇ ಡಾನ್ ಹಾಗೂ ಕಿಕ್‍ಬಾಕ್ಸಿಂಗ್‍ನಲ್ಲಿ 1ನೇ ಡಾನ್ ಹೊಂದಿರುವ ಮೈಸೂರಿನ ರಾಷ್ಟ್ರೀಯ ಚ್ಯಾಂಪಿಯನ್ 15 ವರ್ಷದ ದಿಯಾ ಎಸ್. ಅರಸ್ ಅಂತರಾಷ್ಟ್ರೀಯ ಪಂದ್ಯಾವಳಿಯ ಬಾಲಕೀಯರ -48 ಕೆ.ಜಿ. ಕೆ-1 ವಿಭಾದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದಾಗಿ ಕರ್ನಾಟಕ ಕಿಕ್‍ಬಾಕ್ಸಿಂಗ್ ಅಸ್ಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿ. ರವಿಯವರು ತಿಳಿಸಿದ್ದಾರೆ.

ಅವರು ವಲ್ರ್ಡ್ ಅಸ್ಸೋಸಿಯೇಷನ್ ಆಫ್ ಕಿಕ್‍ಬಾಕ್ಸಿಂಗ್ ಆರ್ಗನೈಸೇಷನ್ಸ್ (ವಾಕೊ), 2016ರ ಆಗಸ್ಟ್ 27 ರಿಂದ ಸೆಪ್ಟಂಬರ್ 3 ರವರಿಗೆ ಐರ್ಲ್ಯಾಂಡ್‍ನ ಡಬ್ಲಿನ್‍ನಲ್ಲಿ ವಾಕೊ ವಲ್ರ್ಡ್ ಕೆಡೆಟ್ ಮತ್ತು ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಚ್ಯಾಂಪಿಯನ್‍ಷಿಪ್ ಆಯೋಜಿಸಿದ್ದಾರೆ. ಏಷ್ಯಾ, ಆಫ್ರಿಕಾ, ಪ್ಯನ್-ಅಮೇರಿಕಾ, ಯುರೋಪ್ ಹಾಗೂ ಒಷಿಯಾನಿಯಾ ಖಂಡದ ಯುವಕಿಕ್‍ಬಾಕ್ಸರ್‍ಗಳು ಈ ಪಂದ್ಯಾವಳಿಯ ಏಳು ವಿಭಾಗಗಳಲ್ಲಿ (ಮ್ಯೂಸಿಕಲ್ ಫಾರ್ಮ್, ಪಾಯಿಂಟ್ ಫೈಟ್, ಕಿಕ್ ಲೈಟ್, ಲೊ ಕಿಕ್, ಲೈಟ್ ಕಾಂಟ್ಯಾಕ್ಟ್, ಫುಲ್ ಕಾಂಟ್ಯಾಕ್ಟ್ ಮತ್ತು ಕೆ-1) ಭಾಗವಹಿಸಲಿದ್ದಾರೆ.

ವಾಕೊ ವಲ್ರ್ಡ್ ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಚ್ಯಾಂಪಿಯಷಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಪ್ರಥಮ ಹಾಗೂ ಏಕೈಕ ಬಾಲಕಿ. 2016ರ ಫೆಬ್ರವರಿಯಲ್ಲಿ ನವದೆಹಲಿಯ ತಾಲ್ಕಟೋರಾ ಒಳ ಕ್ರೀಡಾಂಗಣದಲ್ಲಿ ನಡೆದ ವಾಕೊ ಇಂಡಿಯಾ ನ್ಯಾಷಿನಲ್ ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಚ್ಯಾಂಪಿಯಷಿಪ್‍ನಲ್ಲಿ 15-18 ವರ್ಷ -48 ಕೆ.ಜಿ. ಬಾಲಕೀಯರ ಕೆ-1 ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ದಿಯಾ ಎಸ್ ಅರಸ್ ವಾಕೊ ವಲ್ರ್ಡ್ ಚ್ಯಾಂಪಿಯನ್ಷಿಪ್‍ಗೆ ಆಯ್ಕೆಯಾಗಿರುತ್ತಾಳೆ ಎಂದು ವಾಕೊ ಇಂಡಿಯಾ,ವಲ್ರ್ಡ್ ಅಸ್ಸೋಸಿಯೇಷನ್ ಆಫ್ ಕಿಕ್‍ಬಾಕ್ಸಿಂಗ್ ಆರ್ಗನೈಸೇಷನ್ಸ್ ಸದಸ್ಯತ್ವ ಹೊಂದಿರುತ್ತದೆ. ವಾಕೊ, ಸ್ಪೋರ್ಟ್ ಅಕಾರ್ಡ್‍ಅಂಡ್ ಇಂಟರ್‍ನ್ಯಾಷಿನಲ್ ಗೇಮ್ಸ್ ಅಸ್ಸೋಸಿಯೇಷನ್ (IWGA) ಮತ್ತು ಇಂಟರ್‍ನ್ಯಾಷಿನಲ್ ಒಲಂಪಿಕ್ ಕಮಿಟಿಯ (IOC) ಮಾನ್ಯತೆ ಪಡೆದಿರುತ್ತದೆ.

ಕರಾಟೆಯಲ್ಲಿ ಅಸಾಧಾರಣ ಪ್ರತಿಭೆಗಾಗಿ ಕರ್ನಾಟಕ ಸರ್ಕಾರ ರಾಜ್ಯ “ಪ್ರತಿಭಾ ಪುರಸ್ಕಾರ” ಪ್ರಶಸ್ತಿ ಪಡೆದಿರುವ ದಿಯಾ ಎಸ್. ಅರಸ್, ಶುಕೊ ಕಾಯ್ ಶಿಟೊ ರಿಯು ಕರಾಟೆ ಡೊ ಇಂಡಿಯಾ ಮೂಖ್ಯಸ್ಥರಾದ ಶಿಹಾನ್ ಈ. ಎಸ್. ಕುಮಾರ್ ರವರ ಬಳಿ ಕರಾಟೆ, ಕೊಬುಡೋ ಮತ್ತು ಐಕಿಡೊ ತರಬೇತಿ ಪಡೆಯುತ್ತಿದ್ದಾಳೆ. ಕರಾಟೆ ಹಾಗೂ ಕಿಕ್‍ಬಾಕ್ಸಿಂಗ್‍ನಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿರುವ ದಿಯಾಳ ತಂದೆ ಬಿ. ಎಸ್. ಶ್ರೀನಾಥ್ ಅರಸ್,ಪ್ರಸ್ತುತವಾಗಿ ಈಕೆಗೆ ಕಿಕ್‍ಬಾಕ್ಸಿಂಗ್‍ನಲ್ಲಿ ತರಬೇತಿ ನೀಡುತ್ತಿದ್ದಾರೆ.

Comments are closed.