ಕರ್ನಾಟಕ

ಬೇರೆ ಪಕ್ಷಕ್ಕೆ ಮತಹಾಕಿದರೆ ಕ್ರಮ: ಕುಮಾರಸ್ವಾಮಿ

Pinterest LinkedIn Tumblr

kumaraswamy-e1456494432407ಹಾಸನ: ಜೆಡಿಎಸ್ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿದರೆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಕಾಂಗ್ರೆೆಸ್ ಹಾಗೂ ಬಿಜೆಪಿಯಲ್ಲಿ ಈಗಾಗಲೇ ಅಭ್ಯರ್ಥಿಗಳು ಆಯ್ಕೆಯಾಗಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್‌ನಲ್ಲಿ ಮಾತ್ರ ಭಿನ್ನಸಮರ ಮುಂದುವರೆದಿದೆ.

ಶಾಸಕರು ಆತ್ಮಸಾಕ್ಷಿಯಾಗಿ ನಂಬಿ ಮತಹಾಕಬೇಕು ಮನವಿ ಮಾಡಿದ್ದಾರೆ. ಒಂದು ವೇಳೆ ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಮತಹಾಕಿದರೆ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂಬುವುದಾಗಿ ಪಕ್ಷದ ಬಂಡಾಯ ಶಾಸಕರಿಗೆ ಮುನ್ನಚ್ಚೆರಿಕೆ ನೀಡಿದ್ದಾರೆ.

Comments are closed.