
ಬೆಂಗಳೂರು, ಮೇ ೨೯-ನಗರದ ಹೊರವಲಯದ ಬಿಡದಿ ಬಳಿಯ ಹೆಬ್ಬಡಗೆರೆಯಲ್ಲಿ ಮಹಿಳೆಯೊಬ್ಬರನ್ನು ಕೊಲೆಗೈದು ಮನೆಯ ಹಿಂದೆ ಹೂತು ಹಾಕಿದ್ದ ಪ್ರಕರಣವನ್ನು ಬಿಡದಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಬ್ಬಡಗೆರೆಯ ಮಂಜುಳಾ(೫೫)ಅವರನ್ನು ಮಚ್ಚಿನಿಂದ ಕೊಚ್ಚಿಗೈದು ತಲೆ ಮರೆಸಿಕೊಂಡಿದ್ದ ಆಕೆಯ ಪತಿ ತಿಮ್ಮಯ್ಯ ಹಾಗೂ ಪುತ್ರಿ ರಾಣಿಯನ್ನು ಬಿಡದಿ ಪೊಲೀಸರು ಬಂಧಿಸಿ ಮನೆಯ ಹಿಂದೆ ಹೂತು ಹಾಕಿದ್ದ ಮಂಜುಳಾ ಅವರ ಮೃತದೇಹವನ್ನು ಹೊರತೆಗೆದು ಮರಣೊತ್ತರ ಪರೀಕ್ಷೆ ನಡೆಸಲಾಗಿದೆ.
ರಾಣಿ ಪ್ರೀತಿಸುತಿದ್ದ ಯುವಕನನ್ನು ಬಿಟ್ಟು ಬೇರೊಬ್ಬನ ಜೊತೆ ವಿವಾಹ ಮಾಡಲು ಮಂಜುಳಾ ಅವರು ಮುಂದಾಗಿದ್ದರಿಂದ ಅಲ್ಲದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದ ಆಳಿಯನ ಮಕ್ಖಳನ್ನು ಸಾಕುತ್ತಿದ್ದರಿಂದ ರೊಚ್ಚಿಗೆದ್ದ ರಾಣಿ ತಂದೆಯ ಜೊತೆ ಸೇರಿ ಕೊಲೆ ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಮಂಜುಳಾ ಅವರನ್ನು ಕೊಲೆಗೈದ ನಂತರ ತಿಮ್ಮಯ್ಯ ಹಾಗೂ ರಾಣಿ ತಲೆ ಮರೆಸಿಕೊಂಡಿದ್ದರು ಮಂಜುಳಾ ಅವರ ಇನ್ನೊಬ್ಬ ಪುತ್ರಿ ಪವಿತ್ರಾ ತಾಯಿ ನಾಪತ್ತೆಯಾಗಿರುವ ದೂದು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬಿಡದಿ ಪೊಲೀಸರು ಕೊಲೆ ರಹಸ್ಯವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Comments are closed.