ಕರ್ನಾಟಕ

ಸೆಲ್ಫಿಗೆ ಯುವತಿ ಬಲಿ

Pinterest LinkedIn Tumblr

bought-you-a-selfie-stick-e1462352319799ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಬಳಿಯ ಬೇಲಿಕಾನ್ ಎಂಬಲ್ಲಿ ಸೆಲ್ಫಿ ತೆಗೆದೆಕೊಳ್ಳಲು ಹೋಗಿ ಯುವತಿಯೊಬ್ಬರು ಕಾಲು ಜಾರಿ ಸಮುದ್ರದಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ರಾಜಸ್ಥಾನ ಮೂಲದ ರಮಿತಾ ಮೆಹ್ತಾ (22) ಮೃತ ದುರ್ಧೈವಿ ಯುವತಿ.

ಐದು ಮಂದಿ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಬಂದಿದ್ದ ವೇಳೆ ರಮಿತಾ ಲೈಟ್ ಹೌಸ್ ಬಳಿಯ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಈಜುಗಾರರು ಸಮುದ್ರಕ್ಕೆ ಜಿಗಿದು ಯುವತಿ ದೇಹವನ್ನು ಹೊರತೆಗೆದಿದ್ದಾರೆ.

ಪ್ರಕರಣ ಕುರಿತು ಗೋಕರ್ಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.