ರಾಷ್ಟ್ರೀಯ

ಹುಬ್ಬಳ್ಳಿ -ಸಿಕಂದರಾಬಾದ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರೀ ದರೋಡೆ

Pinterest LinkedIn Tumblr

Train_Bಸೋಲಾಪುರ : ಇಲ್ಲಿನ ಹೂಟಗಿ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ -ಸಿಕಂದರಾಬಾದ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರನ್ನು ಬೆದರಿಸಿದ ದರೋಡೆಕೋರರು ಭಾರೀ ದರೋಡೆ ನಡೆಸಿರುವ ಘಟನೆ ಭಾನುವಾರ ನಸುಕಿನ 4 ಗಂಟೆಯ ವೇಳೆ ನಡೆದಿದೆ.

15 ರಿಂದ 20 ಮಂದಿ ದರೋಡೆಕೋರರ ತಂಡ ಕೃತ್ಯ ವೆಸಗಿದ್ದು ಎಸ್‌ 1 ಬೋಗಿಯಿಂದ ಎಸ್‌ 6 ಬೋಗಿಗಳಲ್ಲಿ ಪ್ರಯಾಣಿಕರನ್ನು ಬೆದರಿಸಿ ನಗ ನಗದು ದರೋಡೆನಡೆಸಿ ಪರಾರಿಯಾಗಿದ್ದಾರೆ.

ನಗ ನಗದು ಕಳೆದುಕೊಂಡವರಲ್ಲಿ ಹಲವರು ಕಲಬುರಗಿಯವರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ರೈಲ್ವೇ ಪೊಲೀಸರುಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.
-ಉದಯವಾಣಿ

Comments are closed.