ಕರ್ನಾಟಕ

ಆರ್ಸಿಬಿ ಬೆಂಗಳೂರು – ಗುಜರಾತ್ ಲಯನ್ಸ್ ತಂಡದ ಮಧ್ಯೆ ಇಂದು ಜಿದ್ದಾಜಿದ್ದಿನ ಹೋರಾಟ; ಗೆಲುವು ಯಾರಿಗೆ…?

Pinterest LinkedIn Tumblr

RCB-LIONS

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಪ್ಲೇ ಆಫ್ ಗೇರಿರುವ ಆರ್ಸಿಬಿ ತಂಡ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಗೆದ್ದವರು ನೇರವಾಗಿ ಫೈನಲ್ ಪ್ರವೇಶಿಸಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದ ಆರ್ಸಿಬಿ ಪ್ಲೇ ಆಫ್ ಎಂಟ್ರಿ ಕೊಡಲು ಸಾಧ್ಯವಾಗಿತ್ತು. ಇಂದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವುದರಿಂದ ಆರ್ಸಿಬಿಗೆ ವರದಾನವಾಗಲಿದ್ದು, ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ.

ಪ್ಲೇ-ಆಫ್ ಹಂತಕ್ಕೇರಲು ಕೊನೇ 4 ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದ್ದ ಸವಾಲನ್ನು ಸಮರ್ಥವಾಗ ನಿಭಾಯಿಸಿರುವ ಆರ್ಸಿಬಿ ಇದೀಗ ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸು ಕಾಣುತ್ತಿದೆ. ಭರ್ಜರಿ ಫಾರ್ಮ್ ನಲ್ಲಿರುವ ಕೊಹ್ಲಿಗೆ ಎಬಿಡಿ ವಿಲಿಯರ್ಸ್ ಮತ್ತು ಗೇಲ್ ಸಾಥ್ ನೀಡುತ್ತಿರುವುದು ಆರ್ಸಿಬಿ ಬ್ಯಾಟಿಂಗ್ ವಿಭಾಗವನ್ನು ಸದೃಢಗೊಳಿಸಿದೆ. ಅತ್ತ ಲಯನ್ಸ್ ತಂಡದ ಬ್ಯಾಟಿಂಗ್ ವಿಭಾಗ ಕೂಡ ಸ್ಫೋಟಕ ಬ್ಯಾಟ್ಸ್ ಮನ್ ಗಳಿಂದ ಕೂಡಿದ್ದು, ರನ್ ಪ್ರವಾಹ ಖಾತ್ರಿ ಎನಿಸಿದೆ.

ಆರ್ಸಿಬಿ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್, ಎಬಿಡಿ ವಿಲಿಯರ್ಸ್, ಕೆಎಲ್ ರಾಹುಲ್, ಶೇನ್ ವಾಟ್ಸನ್, ಸ್ಟುವರ್ಟ್ ಬಿನ್ನಿ, ಸಚಿನ್ ಬೇಬಿ, ಎಸ್. ಅರವಿಂದ್, ಕ್ರಿಸ್ ಜೋರ್ಡಾನ್/ತಬರೇಜ್ ಶಮ್ಸಿ/ಟ್ರಾವಿಸ್ ಹೆಡ್, ಇಕ್ಬಾಲ್ ಅಬ್ದುಲ್ಲಾ/ವರುಣ್ ಆರನ್, ಯಜುವೇಂದ್ರ ಚಾಹಲ್.

ಗುಜರಾತ್ ಲಯನ್ಸ್ ಸಂಭಾವ್ಯ ತಂಡ: ಆರನ್ ಫಿಂಚ್, ಬ್ರೆಂಡನ್ ಮೆಕ್ಕಲಂ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಡ್ವೇನ್ ಸ್ಮಿತ್, ರವೀಂದ್ರ ಜಡೇಜಾ/ಇಶಾನ್ ಕಿಶನ್, ಡ್ವೇನ್ ಭ್ರಾವೊ, ಏಕಲವ್ಯ ದ್ವಿವೇದಿ/ತಂಬೆ/ಶಿವಿಲ್ ಕೌಶಿಕ್, ಶಾದಬ್ ಜಕಾತಿ, ಪ್ರವೀಣ್ ಕುಮಾರ್, ಧವಳ್ ಕುಲಕರ್ಣಿ

Comments are closed.