ಕರಾವಳಿ

ಮೇ 25ಕ್ಕೆ ಪಿಯುಸಿ ಫಲಿತಾಂಶ

Pinterest LinkedIn Tumblr

result

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶ ಇದೇ 25ರಂದು ಪ್ರಕಟ ಆಗಲಿದೆ.

‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಅಂದು ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಬಹಿರಂಗಪಡಿಸಲಿದ್ದು, ಅದೇ ಸಮಯಕ್ಕೆ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಬಹುದು. ಇದೇ 26ರಂದು ಎಲ್ಲ ಕಾಲೇಜುಗಳಲ್ಲಿ ಪ್ರಕಟಿಸಲಾಗುತ್ತದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ರಾಮೇಗೌಡ ಹೇಳಿದರು.

ಮೇ 25ರಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 12 ಗಂಟೆ ನಂತರ ಜಾಲತಾಣಗಳಲ್ಲಿ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು www.karresult.nic.in ಮತ್ತು www.puc.kar.nic.in ನಲ್ಲಿ ನೋಡಬಹುದು.

ಈ ವರ್ಷ ಮೊದಲ ಬಾರಿಗೆ, ಇಲಾಖೆ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುವ ಬದಲು ಆನ್ ಲೈನ್ ನಲ್ಲಿ ಜೆರಾಕ್ಸ್ ಪ್ರತಿಯನ್ನು ಪ್ರಕಟಿಸಲಿದೆ. ಇದೇ ಸಂದರ್ಭದಲ್ಲಿ ಖಾಸಗಿ ವೆಬ್ ಸೈಟ್ ಗಳು ಫಲಿತಾಂಶ ಪ್ರಕಟಿಸುವುದನ್ನು ಕೂಡ ಇಲಾಖೆ ನಿಷೇಧಿಸಿದೆ.

Comments are closed.