ರಾಷ್ಟ್ರೀಯ

ರನ್ ವೇ ಎಂದು ತಪ್ಪಾಗಿ ಗ್ರಹಿಸಿದ ಪೈಲೆಟ್ ವಿಮಾನವನ್ನು ರಸ್ತೆಯಲ್ಲಿಳಿಸಲು ಯತ್ನ! ಮುಂದೆ ಏನಾಯಿತು ಇಲ್ಲಿದೆ ಓದಿ…

Pinterest LinkedIn Tumblr

indigo-airlines1

ಜೈಪುರ್: ರನ್ ವೇ ಎಂದು ತಪ್ಪಾಗಿ ಗ್ರಹಿಸಿದ ಪೈಲೆಟ್ ಇಂಡಿಗೋ ವಿಮಾನವನ್ನು ರಸ್ತೆಯಲ್ಲಿಳಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪೈಲಟ್ ನ್ನು ಕೆಲಸದಿಂದ ವಜಾ ಗೊಳಿಸಲಾಗಿದೆ.

ಫೆ. 27 ರಂದು ಇಂಡಿಗೋ ವಿಮಾನ 6ಇ -237 ಅಹ್ಮದಾಬಾದ್‌ನಿಂದ ಹೊರಟು ಜೈಪುರ್ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ಪೈಲೆಟ್ ಗೊಂದಲಗೊಳಗಾಗಿ ರಸ್ತೆಯಲ್ಲಿಳಿಸಲು ಹೋಗಿದ್ದನು.

ವಿಮಾನ ಕೆಳಗಿಳಿಯುತ್ತಿದ್ದಂತೆ ಕಾಕ್‌ಪಿಟ್‌ನಿಂದ ಸಂದೇಶಗಳು ಸ್ಥಗಿತಗೊಂಡಿದ್ದು, ವಿಮಾನ ರಸ್ತೆಗಿಳಿಯುತ್ತಿದ್ದಂತೆ ಗೊಂದಲ ಪರಿಹರಿಸಿಕೊಂಡ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ರನ್‌ವೇಯಲ್ಲಿಳಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ, ಪೈಲೆಟ್‌ನ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ಬಲ್ಲಮೂಲಗಳು ಹೇಳಿವೆ.

Comments are closed.