ಕರ್ನಾಟಕ

ಗೋನಾಳ್‌ಗೆ ಸಚಿವರ ರಕ್ಷೆ-ಆಕ್ರೋಶ

Pinterest LinkedIn Tumblr

gonalಬೆಂಗಳೂರು, ಮೇ ೨೩ – ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಬೀಮಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರು ಅವರು ನಮ್ಮವರು, ಅವರ ರಕ್ಷಣೆ ನಮ್ಮ ಹೊಣೆ ಎಂದು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಭ್ರಷ್ಟರ ರಕ್ಷಣೆಗೆ ನೆರವಾಗುವ ಹೇಳಿಕೆ ನೀಡಿರುವ ಸಚಿವರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ನ‌ಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೆ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸುತ್ತಿರುವ ವ್ಯಕ್ತಿಗಳ ಪರ ವಹಿಸಿ ಮಾತನಾಡಲು ಹಿಂಜರಿಯುತ್ತಿದ್ದ ಕಾಲವಿತ್ತು. ಆದರೆ, ಈಗ ಸರ್ಕಾರದಲ್ಲಿರುವ ಮಹಾಶಯರುಗಳು ಭ್ರಷ್ಟರ ಪರ ರಕ್ಷಣೆಗೆ ನಿಲ್ಲುವುದಾಗಿ ಹೇಳುತ್ತಿದ್ದಾರೆ. ಸರ್ಕಾರ ನಡೆಸುತ್ತಿರುವ ಮಹಾಶಯರು ಎಂತವರು ಇರಬೇಕು ಎನ್ನುವುದನ್ನು ಜನರೇ ತೀರ್ಮಾನಿಸಬೇಕು ಎಂದರು.
ಈ ಸರ್ಕಾರಕ್ಕಿಂತ ಹಿಂದಿನ ಸರ್ಕಾರ ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ. ಅಂದರೆ ಮುಂದೆ ಬರುವ ಸರ್ಕಾರ ಜನಪ್ರತನಿಧಿಗಳು ಇನ್ನಷ್ಟು ಮತ್ತಷ್ಟು ಕಡು ಭ್ರಷ್ಟರೆಂದೇ ಅರ್ಥ. ಈ ವ್ಯವಸ್ಥೆ ಬದಲಾಗಬೇಕಿದೆ.
ಬೆಂಬಲ
ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಭೂ ಒತ್ತುವರಿ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಸಚಿವ ಆಂಜನೇಯರವರ ಹೇಳಿಕೆ ಸ್ವಜನ ಪಕ್ಷಪಾತದ ಪರಮಾವಧಿ, ಅವರ ಹೇಳಿಕೆ ವಿರುದ್ಧ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಖಂಡಿತ ಸಚಿವ ಆಂಜನೇಯ ತೊಂದರೆಗೆ ಸಿಲುಕುತ್ತಾರೆ ಎಂದರು.

Comments are closed.