ಕರ್ನಾಟಕ

ಪ್ರಾರ್ಥನೆಗೆ ಹೋಗುತ್ತಿದ್ದ ವ್ಯಕ್ತಿ ಭೀಕರ ಕೊಲೆ

Pinterest LinkedIn Tumblr

killಬೆಂಗಳೂರು,ಮೇ.೨೩-ಶಬೆ ಬರಾತ್ ಪ್ರಾರ್ಥನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬನ್ನು ಚಾಕುವುನಿಮದ ಇರಿದು ಬರ್ಬರವಾಗಿ ಕೊಎಗೈದಿರುವ ದುರ್ಘಟನೆ ನಿನ್ನೆ ರಾತ್ರಿ ಬನಶಂಕರಿಯ ಕಾವೇರಿನಗರ ಕೊಳಗೇರಿಯಲ್ಲಿ ನಡೆದಿದೆ.
ಕಾವೇರಿ ನಗರದ ಅಕ್ರಂಪಾಷ(೩೩)ಕೊಲೆಯಾದವರು,ರಾತ್ರಿ ೧೧.೩೦ರ ವೇಳೆ ಶಬೆ ಬರಾತ್ ಪ್ರಾರ್ಥನೆಗೆ ಮಸೀದಿ ಹಾಗೂ ಖಬರಸ್ಥಾನ(ಸ್ಮಶಾನ)ಕ್ಕೆ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದ ಅಕ್ರಂಪಾಷನನ್ನು ಅಯ್ಯಪ್ಪ ದೇವಾಲಯದ ಬಳಿ ವಸೀಂ,ಇಮ್ರಾನ್ ಸೇರಿ ನಾಲ್ವರು ತಡೆದಿದ್ದಾರೆ.
ಅಕ್ರಂಪಾಷನ ಜೊತೆ ಜಗಳ ತೆಗೆದ ನಾಲ್ವರು ಆತನ ಮೇಲೆರಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ,ಕೂಲಿ ಕೆಲಸ ಮಾಡಿಕೊಂಡಿದ್ದ ಅಕ್ರಂಪಾಷನನ್ನು ಹಳೆಯ ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ ಎಂದು ಶಂಕಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ವಸೀಂ,ಇಮ್ರಾನ್ ಸೇರಿ ಇನ್ನಿತರ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಲೋಕೇಶ್‌ಕುಮಾರ್ ತಿಳಿಸಿದ್ದಾರೆ.

ಲಾರಿ ಹರಿದು ಬಡಗಿ ಸಾವು
ಬೆಂಗಳೂರು,ಮೇ.೨೩-ವೇಗವಾಗಿ ಬಂದ ಲಾರಿ ಹರಿದು ಬೈಕ್‌ನಿಂದ ಆಯತಪ್ಪಿ ಬಿದ್ದಿದ್ದ ಬಡಗಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಚಿಕ್ಕಜಾಲದ ಎಂವಿಐಬಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಯಲಹಂಕದ ವಿನಾಯಕನಗರದ ಮಣಿಕಂಠಾಚಾರ್(೨೪)ಮೃತಪಟ್ಟವರು,ರಾತ್ರಿ ೭.೩೦ರ ವೇಳೆ ಚಿಕ್ಕಜಾಲದ ಬಳಿ ಕೆಲಸ ಮುಗಿಸಿಕೊಂಡು ಮನೆಗ ಪಲ್ಸರ್ ಬೈಕ್‌ನಲ್ಲಿ ಮಣಿಕಂಠಾಚಾರ್ ಹೋಗುತ್ತಿದ್ದಾಗ ಮಾರ್ಗಮಧ್ಯೆ ಎಂವಿಐಬಿ ರಸ್ತೆಯ ಸಿಂಧೂ ಕಾರ್ಗೊ ಬಳಿ ರಸ್ತೆ ಗುಂಡಿಯನ್ನು ಎಗರಿ ಆಯತಪ್ಪಿ ಕೆಳಗೆಬಿದ್ದಿದ್ದಾರೆ.
ಈ ವೇಳೆ ಹಿಂದಿನಿಂದ ಬಂದ ಲಾರಿ ಅವರ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಲಾರಿಯನ್ನು ವಶಪಡಿಸಿಕೊಂಡಿರುವ ಚಿಕ್ಕಜಾಲ ಸಂಚಾರ ಪೊಲೀಸರು ಪರಾರಿಯಾಗಿರುವ ಚಾಲಕನಿಗಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ರೇಣುಕಾ ಅವರು ತಿಳಿಸಿದ್ದಾರೆ.
ಮನೆ ಕಳವು
ಜಕ್ಕೂರು ಲೇಔಟ್‌ನ ಶೋಭಾ ಎಪರಾಲ್ಡ್ ವಿಲ್ಲಾದಲ್ಲಿ ವಾಸಿಸುತ್ತಿದ್ದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಚಿನ್ನಾಭರಣಗಳು ಸೇರಿ ಲಕ್ಷಾಂತರ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಶೋಭಾ ಎಪರಾಲ್ಡ್ ವಿಲ್ಲಾದ ಉಪೇಶ್ ಪ್ರಧಾನ್ ಅವರು ಚೆನ್ನೈನಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಕಳೆದ ಮೇ೨೦ರಂದು ಮನೆಗೆ ಬೀಗ ಹಾಕಿಕೊಂಡು ಹೋಗಿ ನಿನ್ನೆ ರಾತ್ರಿ ವಾಪಸಾಗಿ ಬಂದು ನೋಡಿದಾಗ ಬೀಗ ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು ೨ಜೊತೆ ಚಿನ್ನದ ಓಲೆ,ಲಕ್ಷಾಂತರ ರೂಗಳ ನಗದನ್ನು ದೋಚಿ ಪರಾರಿಯಾಗಿದ್ದರು.
ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಕಲಿ ಸನ್‌ಗ್ಲಾಸ್ ಮಾರಾಟ ಒಬ್ಬನ ಬಂಧನ
ಬೆಂಗಳೂರು, ಮೇ ೨೩ – ನಕಲಿ ರೇಬಾನ್ ಕಂಪನಿಯ ಸನ್‌ಗ್ಲಾಸ್ ಅನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೬ ಲಕ್ಷ ೭೫ ಸಾವಿರ ಮೌಲ್ಯದ ನಕಲಿ ಸನ್‌ಗ್ಲಾಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಟನ್‌ಪೇಟೆಯ ಸಲಾ ಉದ್ದೀನ್ (೪೦) ಬಂಧಿತ ಆರೋಪಿಯಾಗಿದ್ದಾನೆ. ಬಳೇಪೇಟೆಯ ಜಾಮ್ ಆಪ್ಟಿಕಲ್ಸ್ ಕನ್ನಡಕದ ಅಂಗಡಿಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನಕಲಿ ಸನ್‌ಗ್ಲಾಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಶರತ್ ಚಂದ್ರ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಯು ಕಳೆದ ೬ ವರ್ಷಗಳಿಂದ ನಕಲಿ ರೇಬಾನ್ ಸನ್‌ಗ್ಲಾಸ್‌ಗಳ ಮಾರಾಟದಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ.
ಕ್ರಿಕೆಟ್ ಬೆಟ್ಟಿಂಗ್
ಉಪ್ಪಾರಪೇಟೆಯ ಕಾನಿಷ್ಕ ಹೋಟೆಲ್‌ನ ಕೊಠಡಿಯೊಂದರ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ನಗದು ಸೇರಿ ೨ ಲಕ್ಷ ೨೪ ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಾಜಿನಗರದ ದೀಪಕ್ ಜೈನ್ (೪೯) ಬಂಧಿತ ಆರೋಪಿಯಾಗಿದ್ದು, ಆರೋಪಿಯಿಂದ ೨ ಲಕ್ಷ ೨೪ ಸಾವಿರ ನಗದು, ೨ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ನಿನ್ನೆ ನಡೆದ ಐಪಿಎಲ್ ಟಿ-೨೦ ಕ್ರಿಕೆಟ್ ಪಂದ್ಯಕ್ಕೆ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎಂದು
ಪೊಲೀಸರು ತಿಳಿಸಿದ್ದಾರೆ.

Comments are closed.