ಕರ್ನಾಟಕ

ಮತ್ತೊಂದು ಮರ್ಯಾದ ಹತ್ಯೆ

Pinterest LinkedIn Tumblr

silhouetteಕೋಲಾರ, ಮೇ ೨೩ – ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಇತ್ತೀಚೆಗೆ ಮರ್ಯಾದೆ ಹತ್ಯೆ ಪ್ರಕರಣಗಳು ನಡೆದು ಈ ದುರ್ಘಟನೆ ಜನರ ಮನದಿಂದ ಮಾಸುವ ಮುನ್ನವೇ ಕೋಲಾರ ಜಿಲ್ಲೆಯಲ್ಲಿ ಇಂತಹದೊಂದು ಪ್ರಕರಣ ನಡೆದಿದೆ.
ಶ್ರೀನಿವಾಸಪುರ ತಾಲ್ಲೂಕಿನ ತಮಟಂಪಲ್ಲಿ ಗ್ರಾಮದ ಹುಡುಗಿ ಅನ್ಯ ಜಾತಿಯ ಯುಕನನ್ನು ಪ್ರೀತಿಸಿದಳು ಎನ್ನುವ ಕಾರಣಕ್ಕಾಗಿ ತಂದೆಯೇ ಮಗಳನ್ನು ಕತ್ತು ಹಿಸುಕಿ ಸಾಯಿಸಿರುವ ಘಟನೆ ನಡೆದಿದೆ.
17 ವರ್ಷದ ಪ್ರಿಯಾರೆಡ್ಡಿಯನ್ನು ತಂದೆ ಭೈರಾರೆಡ್ಡಿ ಹತ್ಯೆ ಮಾಡಿದ್ದಾನೆ.
ತಮಟಂಪಲ್ಲಿಯ ಊರಿನ ತೋಟದಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಭೋವಿ ಸಮುದಾಯಕ್ಕೆ ಸೇರಿದ ಯುವಕ ಹರೀಶ್‌ನನ್ನು ಪ್ರೀತಿಸುತ್ತಿದ್ದಳು. ಇದು ಪ್ರಿಯಾರೆಡ್ಡಿ ಅವರ ಮನೆಯವರಿಗೆ ತಿಳಿದು ಹರೀಶ್ ಜತೆ ಮಾತನಾಡಬಾರದು ಎಂದು ತಂದೆ ಭೈರಾರೆಡ್ಡಿ ತಾಕೀತು ಮಾಡಿದ್ದರು. ಇದನ್ನು ಲೆಕ್ಕಿಸದೇ ಮಗಳು ಹರೀಶ್‌ನನ್ನು ಕದ್ದುಮುಚ್ಚಿ ಭೇಟಿಯಾಗಿ ಮಾತನಾಡುತ್ತಿದ್ದಳು ಇದರಿಂದ ಕುಪಿತಗೊಂಡ ತಂದೆ ಭೈರಾರೆಡ್ಡಿ ಮಗಳು ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭೈರಾರೆಡ್ಡಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Comments are closed.