
ಬೆಂಗಳೂರು: ಬೆಂಗಳೂರಿನ ಹಲವು ಕಡೆ ಬುಧವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಮಳೆಯಿಂದಾಗ ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆ ವಾಹನ ಸಂಚಾರ ತೀವ್ರ ಅಸ್ತವ್ಯಸ್ತವಾಗಿದೆ.
ಜಯನಗರ, ವಸಂತನಗರ, ಕಾರ್ಪೆರೇಷನ್ ಸರ್ಕಲ್, ರಾಜಾಜಿನಗರ, ಯಶವಂತಪುರ, ಸರಸ್ವತಿ ಪುರ, ಮಹಾಲಕ್ಷ್ಮೀ ಲೇಔಟ್, ಜೆ.ಸಿ.ರಸ್ತೆ, ಹೆಬ್ಬಾಳ, ಸಹಕಾರ ನಗರ, ಮಲ್ಲೇಶ್ವರಂ, ಆರ್ಟಿ ನಗರ, ರಿಚ್ವುಂಡ್ ಸರ್ಕಲ್ ಸೇರಿದಂತೆ ಹಲವೆಡೆ ಜೋರು ಮಳೆಯಾಗುತ್ತಿದೆ.
ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣ, ಲ್ಯಾವೆಲ್ಲೆ ರೋಡ್, ಕಾರ್ಪೆರೇಷನ್ ಸರ್ಕಲ್ ಸೇರಿದಂತೆ ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
Comments are closed.