ರಾಷ್ಟ್ರೀಯ

ದಾಖಲೆಯ ಹಾಲು ನೀಡಿದ ಲೂಧಿಯಾನಾದ ಎರಡು ಹಸುಗಳು

Pinterest LinkedIn Tumblr

ludhiana-cow

ಲೂಧಿಯಾನ: ಪಂಜಾಬಿನ ಲೂಧಿಯಾನದ ಎರಡು ಹಸುಗಳು ದಿನವೊಂದಕ್ಕೆ ಕ್ರಮವಾಗಿ 54.3 ಹಾಗೂ 53.6 ಲೀಟರ್ ಹಾಲು ನೀಡುವ ಮೂಲಕ ಈ ಹಿಂದೆ 2010 ರಲ್ಲಿ ಇದ್ದ 53 ಲೀಟರ್ ಹಾಲಿನ ದಾಖಲೆ ಅಳಿಸಿಹಾಕಿವೆ.

ಎಫ್ಸಿ 1363 ಮತ್ತಯ ಎಫ್ ಸಿ 1319 ಮಿಶ್ರತಳಿಯ ಜರ್ಸಿ ಹಸುಗಳು ಲೂಧಿಯಾನದ ಅಂಗದ್ ದೇವ್ ಪಶು ವೈದ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ನಿರ್ದೇಶಕ ಪ್ರಕಾಶ್ ಸಿಂಗ್ ಬ್ರಾರ್ ಪ್ರಕಾರ ಈ ಹಸುಗಳು ದಿನಕ್ಕೆ ಮೂರು ಬಾರಿ ಹಾಲು ನೀಡುತ್ತವೆ ಮತ್ತು ಅತಿಯಾದ ಉಷ್ಣವನ್ನು ಸಹ ಸಹಿಸಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.

ಹೈಬ್ರಿಡ್ ತಳಿಯ ಈ ಎರಡು ಹಸುಗಳು 5 ಮತ್ತು 6 ಪ್ರಾಯದಲ್ಲಿದ್ದು, ಎರಡು ಹಸುಗಳು ವಿಶ್ವವಿದ್ಯಾಲಯದ ಹೈನು ಕೇಂದ್ರದಲ್ಲಿ ಜನ್ಮ ತಾಳಿದ್ದವು. ಸಾಮಾನ್ಯವಾಗಿ ಹಸುಗಳು ದಿನಕ್ಕೆ 20 ರಿಂದ 25 ಲೀಟರ್ ಹಾಲು ನೀಡುವುದು ಸಾಮಾನ್ಯ ಆದರೆ ಈ ಎರಡು ಹಸುಗಳು ಅಚ್ಚರಿ ಎಂಬಂತೆ 305 ದಿನಗಳಿಗೆ 10,500 ಲೀಟರ್ ಹಾಲು ನೀಡಿ ಹೊಸ ದಾಖಲೆ ನಿರ್ವಿುಸಿವೆ. ಮಿಶ್ರ ತಳಿಯಿಂದ ಈ ಸಾಧನೆ ಸಾಧ್ಯವಾಗಿದ್ದು ಸದ್ಯ ವಿಶ್ವವಿದ್ಯಾಲಯದ ಹೈನು ಕೇಂದ್ರದಲ್ಲಿ ವಿವಿಧ ಬಗೆಯ 200 ಮಿಶ್ರತಳಿ ಹಸುಗಳಿವೆ ಎಂದು ಕುಲಪತಿ ಎ. ಎಸ್. ನಂದಾ ಹೇಳಿದ್ದಾರೆ.

Comments are closed.