ಕರ್ನಾಟಕ

ಸರ ಅಪಹರಣ ಮಾಡುತ್ತಿದ್ದ ಇರಾನಿ ಗ್ಯಾಂಗ್ ಸದಸ್ಯನ ಬಂಧನ

Pinterest LinkedIn Tumblr

iraniಬೆಂಗಳೂರು,ಮೇ 18-ನಗರದ ಪ್ರಮುಖ ಕಡೆಗಳಲ್ಲಿ ದ್ವಿಚಕ್ರ ವಾಹನ ಬಳಸಿ ಮನೆ ಮುಂದೆ ಹಾಗೂ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರುತಿಸಿ ಸರ ಅಪಹರಣ ಮಾಡುತ್ತಿದ್ದ ಇರಾನಿ ಗ್ಯಾಂಗ್‌ನ ಸದಸ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೈದರ್ ಸಯ್ಯದ್ ನೂರ್ ಇರಾನಿ(24) ಬಂಧಿತ ಆರೋಪಿಯಾಗಿದ್ದು, ಈತನಿಂದ 27 ಲಕ್ಷ ರೂ. ಬೆಲೆಯ 900 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈತನ ಬಂಧನದಿಂದ ಜ್ಞಾನಭಾರತಿ ವ್ಯಾಪ್ತಿಯ ನಾಲ್ಕು ಪ್ರಕರಣ, ಬಾಣಸವಾಡಿ ಮೂರು, ಚಂದ್ರಲೇಔಟ್ 4, ಹನುಮಂತನಗರ 2, ಎಚ್‌ಎಸ್‌ಆರ್ ಲೇಔಟ್ 2, ಸುಬ್ರಮಣ್ಯಪುರ 2, ಸಂಜಯನಗರ, ವಿಜಯನಗರ, ವಿದ್ಯಾರಣ್ಯಾಪುರ, ವರ್ತೂರು, ಯಶವಂತಪುರ, ಅಮೃತಹಳ್ಳಿ, ಆಡುಗೋಡಿ, ಕೋರಮಂಗಲದ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 25 ಸರ ಅಪಹರಣ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.

ನಗರದಲ್ಲಿ ಆಗಾಗ್ಗೆ ಸರಗಳ್ಳನ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಪೊಲೀಸರು ಹದ್ದಿನ ಕಣ್ಣಿಟ್ಟು ಗಸ್ತು ತಿರುಗುತ್ತಿದ್ದರೂ ಬೈಕ್‌ನಲ್ಲಿ ಮುಂಜಾನೆ ಹಾಗೂ ರಾತ್ರಿ ವೇಳೆ ಸುತ್ತಾಡುತ್ತಾ, ಮಹಿಳೆ ಹಾಗೂ ವೃದ್ಧೆಯರ ಸರ ಅಪಹರಿಸುತ್ತಿರುವುದು ಪೊಲೀಸರ ನಿದ್ದೆಗೆಡಿಸಿದೆ.

Comments are closed.