ರಾಷ್ಟ್ರೀಯ

ಕರಾಚಿಯಲ್ಲಿ ದಾವೂದ್ ಭಂಟನ ರೆಸ್ಟೋರೆಂಟ್‌ಗಳ ವಹಿವಾಟು ಬಹಿರಂಗ

Pinterest LinkedIn Tumblr

dawoodನವದೆಹಲಿ, ಮೇ 18- ಭೂಗತ ಪಾತಕಿ ದಾವೂದ್ ಇಬ್ರಾeಹಿಂ ಕಂಪೆನಿ (ಡಿ-ಕಂಪೆನಿ)ಯ ನಿರ್ವಾಹಕ ದಾವೂದ್ ಭಾಯಿ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ ಕರಾಚಿಯಲ್ಲಿ ಜಂಕ್‌ಫುಡ್ ರೆಸ್ಟೋರೆಂಟ್ ಸೇರಿದಂತೆ ಹಲವು ವ್ಯಾಪಾರ-ವಹಿವಾಟುಗಳನ್ನು ಹೊಂದಿದ್ದು, ಆ ವ್ಯವಹಾರವನ್ನೆಲ್ಲ ಅವನ ಮಗನೇ ನೋಡಿಕೊಳ್ಳುತ್ತಿದ್ದಾನೆ ಎಂಬ ವಿಷಯವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಹಿರಂಗಪಡಿಸಿದೆ. ಭರೂಚ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಈ ವಿಷಯ ತಿಳಿಸಲಾಗಿದೆ. ಜವೇದ್ ಚಿಕ್ನಾ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದು, ಪಾಕಿಸ್ಥಾನದಲ್ಲಿರುವ ಅವನ ಎರಡೂ ವಿಳಾಸಗಳನ್ನು ನಮೂದಿಸಿದೆ.

ಇದರಲ್ಲಿ ಕರಾಚಿಯಲ್ಲಿರುವ ಬಾಘ್ ಇಬ್ನೆ ಖಾಸಿಂ ಬಳಿಯ ಕ್ಲಿಫ್ಟನ್‌ನಲ್ಲಿರುವ ಒಂದು ಟವರ್ ಸೇರಿದೆ. ವಿಶೇಷವೆಂದರೆ, ಕ್ಲಿಫ್ಟನ್ ಪ್ರದೇಶದಲ್ಲೇ ಜಾವೇದ್ ಚಿಕ್ನಾ ಅಥವಾ ದಾವೂದ್ ಬಾಯಿ ಪಟೇಲ್‌ನ ಬಾಸ್, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಿವಾಸ ಕೂಡ ಇದೆ. ಇನ್ನೊಂದು ವಿಳಾಸವನ್ನು ಡಿ-5, ಮ್ಯಾನ್ಮಾರ್ ಆರ್ಕೇಡ್, ಗುಲ್ಷನ್ ಇ-ಇಕ್ಬಾಲ್, ಗುಲ್ಷನ್ ಸೈಕಿಯಾಟ್ರಿಕ್ ಹಾಸ್ಪಿಟಲ್ ಕರಾಚಿ ಎಂದು ನಮೂದಿಸಲಾಗಿದೆ.

2002ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದ ವೇಳೆ ಸಕ್ರಿಯರಾಗಿದ್ದ ಆರ್‌ಎಸ್‌ಎಸ್, ವಿಎಚ್‌ಪಿ, ಭಜರಂಗದಳ ಹಾಗೂ ಬಿಜೆಪಿ ಬೆಂಬಲಿತ ಶಿರೀಷ್‌ಭಾಯ್ ಬೆಂಗಾಲಿ, ಅಡ್ವೊಕೇಟ್ ಮೋದಿ, ವಿರಲ್ ದೇಸಾಯಿ ಹಾಗೂ ಜಯ್‌ಕರ್ ಮಹಾರಾಜ್ ಎಂಬ ನಾಲ್ವರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲೂ ಜಾವೇದ್ ಚಿಕ್ನಾ ಭಾಗಿಯಾಗಿದ್ದ ಎಂದು ಎನ್‌ಐಎ ಹೇಳಿದೆ.

Comments are closed.