ಕರ್ನಾಟಕ

ಪಿಯು ಪ್ರವೇಶಕ್ಕೆ ವಿದ್ಯಾರ್ಥಿಗಳ ಆತುರ-ಕಾತುರ ಶುರು !

Pinterest LinkedIn Tumblr

student

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ದಿಕ್ಕು ಬದಲಿಸುವ ಎಸ್ ಎಸ್ ಎಲ್ ಸಿ ಫಲಿತಾಂಶ ನಿನ್ನೆ ತಾನೇ ಹೊರ ಬಿದ್ದಿದೆ. ಆಗಲೇ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಯಾವ ಕಾಲೇಜು ಸೇರಿಕೊಳ್ಳಬೇಕು ಎಂಬ ಆತುರ, ಹಾಗೂ ಕಾತುರ ಶುರುವಾಗಿದೆ.

ಉತ್ತಮ ಅಂಕಗಳಲ್ಲಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಎಲ್ಲೆಡೆ ಬೇಡಿಕೆ ಕೂಡ ಹೆಚ್ಚಾಗಿದೆ. ಇಷ್ಷು ದಿನ ಫಲಿತಾಂಶದ ತವಕದಲ್ಲಿದ ವಿದ್ಯಾರ್ಥಿಗಳಿಗೆ ಇದೀಗ ಹೊಸ ಕಾಲೇಜ್ ಕ್ಯಾಂಪಸ್‌ನಲ್ಲಿ ಅಡ್ಡಾಡುವ ತವಕ. ಅಲ್ಲದೇ ಪಿಯುಸಿಯಲ್ಲಿಯೂ ಹೆಚ್ಚು ಫಲಿತಾಂಶ ಗಿಟ್ಟಿಸಿಕೊಳ್ಳವ ಕಾತರ.

ಎಸ್ ಎಸ್ ಎಲ್ ಸಿ ಬಳಿಕ ಯಾವ ವಿಷಯದಲ್ಲಿ ಮುಂದುವರೆಯಬೇಕೆಂದು ಕೊಂಚ ತಲೆ ಕೆಡೆಸಿಕೊಂಡೆ ವಿದ್ಯಾರ್ಥಿಗಳು ಇಂದು ನಗರದ ನಾನಾ ಕಾಲೇಜುಗಳ ಮುಂದೆ ಪ್ರಥಮ ಪಿಯುಸಿಗಾಗಿ ಅರ್ಜಿ ಸಲ್ಲಿಸಲು ಸರದಿ ಸಾಲಿನಲ್ಲಿ ನಿಂತು ಅರ್ಜಿ ಪಡೆದಿದ್ದು ಕಂಡು ಬಂತು.

ವಿಜ್ಞಾನ, ಕಲೆ, ವಾಣಿಜ್ಯ ವಿಭಾಗಗಳಲ್ಲಿ ಕಲಿಯುವ ಆಸಕ್ತಿಯಿಂದ ವಿದ್ಯಾರ್ಥಿಗಳು ಇಂದು ಅರ್ಜಿ ಪಡೆಯಲು ಗಂಟೆಗಟ್ಟಲೇ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ನಗರದ ಪ್ರತಿಷ್ಠಿತ ಕಾಲೇಜುಗಳ ಕ್ಯಾಂಪಸ್‌ನಲ್ಲಿ ಪಿಯುಸಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ದಂಡು ಇಂದು ಅರ್ಜಿ ಪಡೆಯಲು ಕಾದು ನಿಂತಿದ್ದರು. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಮಲ್ಲೇಶ್ವರದ ವಿದ್ಯಾ ಮಂದಿರ ಹಾಗೂ ಎಂಇಎಸ್ ಹಾಗೂ ಇತರೆ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿಗಾಗಿ ಕಾದಿದ್ದು ಕಂಡು ಬಂತು. ಇಲ್ಲಿ ಮೊದಲೇ ಟೋಕನ್ ನೀಡಿ ನಂತರ ಅರ್ಜಿ ವಿತರಿಸಲಾಗುತ್ತಿತ್ತು.
ಪ್ರೌಢಶಾಲೆ ಹಂತ ಮುಗಿಸಿ ಕಾಲೇಜಿನತ್ತ ದಾಪುಗಾಲು ಇಡಲು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯಾವ ವಿಷಯ ಸೂಕ್ತ ಎಂಬ ಅಭಿಪ್ರಾಯ ಸಂಗ್ರಹಿಸಿ ಅರ್ಜಿ ಹಾಕುತ್ತಿದ್ದಾರೆ.

Comments are closed.