ಕರ್ನಾಟಕ

ಡಾ.ಅಂಬೇಡ್ಕರ್ ತತ್ವ ಸಿದ್ದಾಂತಗಳ ಪ್ರತಿಪಾದನೆಗೆ ಸಿದ್ದರಾಮಯ್ಯ ಕೆರೆ

Pinterest LinkedIn Tumblr

siddu11

ತುಮಕೂರು: ಸಂವಿಧಾನ ಶಿಲ್ವಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅಸ್ತ್ರಗಳ ಮೂಲಕ ತಳ ಸಮುದಾಯದ ಜನತೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಮುಂದಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಶಿರಾ ತಾಲೂಕು ದ್ವಾರನಕುಂಟೆ ಗ್ರಾಮದಲ್ಲಿ ಕನಕ ಸೇವಾ ಸಮಿತಿ ಆಯೋಜಿಸಿದ್ದ ಕನಕ ಜಂಯತಿ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಳ ಸಮುದಾಯಗಳು ಶಿಕ್ಷಣವನ್ನು ಪಡೆದು ಸಂಘಟಿತರಾಗಿ ಹೋರಾಟ ಮಾಡಬೇಕು. ಆಗ ಮಾತ್ರ ಸಂವಿಧಾನದತ್ತವಾಗಿ ಲಭ್ಯವಿರುವ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದರು.

ತಳಸಮುದಾಯದ ಅಭಿವೃದ್ಧಿಯಾಗಬೇಕಾದರೆ ಅವರಿಗೆ ಅರ್ಥಿಕ ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನ ಸಮಾನವಾಗಿ ಹಂಚಿಕೆಯಾಗಬೇಕು. ನಮ್ಮ ಸಂವಿಧಾನದ ಆಶಯವೂ ಇದೇ ಆಗಿದೆ. ಅಲ್ಲದೆ ರಾಜಕೀಯ ಅಧಿಕಾರ ಎಲ್ಲಾ ಅಭಿವೃದ್ಧಿಗಳು ಕೀಲಿ ಕೈ ಆಗಿರುವ ಹಿನ್ನೆಲೆಯಲ್ಲಿ ಕೇವಲ ಜಿಪಂ, ತಾಪಂಗಳಲ್ಲದೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿಯೂ ಈ ವರ್ಗಗಳಿಗೆ ರಾಜಕೀಯ ಅಧಿಕಾರ ದೊರೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಪಾದಿಸಿದರು.

ಕಂದಾಚಾರ, ಮೂಢನಂಬಿಕೆಗಳು ಸಮದಾಯದ ಪ್ರಗತಿಗೆ ಮಾರಕ ಹಾಗೆಯೇ ಜಾತಿ ವ್ಯವಸ್ಥೆಯೇ ಇಂದಿನ ದುಸ್ಥಿತಿಗೆ ಮೂಲ ಕಾರಣ, ಇದು ತೊಲಗಬೇಕೆಂದರೆ ನಾವುಗಳು ವ್ಶೆಜ್ಞಾನಿಕ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು. ಜಾತಿ ವ್ಯವಸ್ಥೆ ಹೋಗಲಾಡಿಸಲು ಬಸವಣ್ಣ, ಕನಕದಾಸರು, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಅಂತರ್ಜಾತಿ ವಿವಾಹ ಹಾಗೂ ಸಹಪಂಕ್ತಿ ಭೋಜನವನ್ನು ಎಲ್ಲರೂ ಕೈಗೊಳ್ಳಬೇಕು ಎಂದರು. ಇಂದಿಗೂ ದಲಿತರು, ಹಿಂದುಳಿದ ವರ್ಗಗಳ ಜನರಿಗೆ ದೇವಾಲಯಕ್ಕೆ ಪ್ರವೇಶವಿಲ್ಲವೆಂದರೆ ದಾರ್ಶನಿಕರು ಕಂಡ ಕನಸಿನ ಭಾರತ ಇಂದಿಗೂ ಸಕಾರಗೊಂಡಿಲ್ಲವೆಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ಮುಖ್ಯಮಂತ್ರಿ ವಿಷಾದಿಸಿದರು.

ನನ್ನ ರಾಜಕೀಯ ಜೀವನದಲ್ಲಿ ಟೀಕೆ ಹೊಸದಲ್ಲ. ವಿರೋಧಪಕ್ಷಗಳು ತಮ್ಮ ಮುಖಂಡರ ಒಲೈಕೆಗೆ ಟೀಕೆ ಮಾಡಿದರೆ ನಮ್ಮ ಪಕ್ಷದವರೇ ಕೆಲವರು ನಮ್ಮ ಏಳಿಗೆಯನ್ನು ಸಹಿಸದೆ ಹೊಟ್ಟೆಕಿಚ್ಚಿನಿಂದ ಟೀಕೆ ಮಾಡುತ್ತಾರೆ.ಯಾವುದೇ ಟೀಕೆಗೆ ಹೆದರಲ್ಲ. ಅಧಿಕಾರದಲ್ಲಿ ಇರುವವರೆಗೆ ಸಾಮಾಜಿಕ ನ್ಯಾಯಕ್ಕಾಗಿ ದುಡಿಯುತ್ತನೆ ಎಂದರು. ಸಚಿವ ಟಿ.ಬಿ.ಜಯಚಂದ್ರ, ಸಂಸದ ಚಂದ್ರಪ್ಪ, ಶಾಸಕರಾದ ಕೆಎನ್.ರಾಜಣ್ಣ,ವಿ.ಪಸದಸ್ಯ ಹೆಚ್.ಎಂ.ರೇವಣ್ಣ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

Write A Comment