ಕರ್ನಾಟಕ

ನೆರೆ ರಾಜ್ಯಗಳಲ್ಲಿ ಚುನಾವಣೆ; ನಿಲ್ದಾಣಗಳಲ್ಲಿ ಜನರು ದಂಡು

Pinterest LinkedIn Tumblr

train

ಬೆಂಗಳೂರು: ತಮಿಳುನಾಡು ಮತ್ತು ಕೇರಳದಲ್ಲಿ ನಾಳೆ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿರುವುದರಿಂದ ನಗರದಲ್ಲಿ ನೆಲೆಸಿರುವ ಈ ಎರಡೂ ರಾಜ್ಯದವರು ತಮ್ಮ ತಮ್ಮ ಊರುಗಳಿಗೆ ಹೊರಟಿದ್ದರಿಂದ ನಗರದ ಪ್ರಮುಖ ಬಸ್, ರೈಲುನಿಲ್ದಾಣಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು.

ನಗರದ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಟಿಕೆಟ್‌ಗಾಗಿ ಸಾಲು ಗಟ್ಟಿ ನಿಂತಿರುವುದು ಕಂಡುಬಂತು. ಕೆಎಸ್‌ಆರ್‌ಟಿಸಿ ತಮಿಳುನಾಡಿಗೆ ೫೦ಕ್ಕೂ ಅಧಿಕ ಬಸ್ ಹಾಗೂ ತಮಿಳುನಾಡು ಸಾರಿಗೆ ಇಲಾಖೆ ೭೦ಕ್ಕೂ ಅಧಿಕ ಬಸ್‌ಗಳನ್ನು ಹಾಕಿದ್ದರೂ ಸಾಕಾಗದೆ ಪ್ರಯಾಣಿಕರು ಸೀಟಿಗಾಗಿ ಪರದಾಡುವಂತಾಯಿತು. ಸಾವಿರಾರು ಮಂದಿ ಶುಕ್ರವಾರ ಸಂಜೆ ಹಾಗೂ ನಿನ್ನೆ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದರು. ಆದರೆ ಬಸ್‌ಗಳಲ್ಲಿ ಸೀಟು ಸಿಗದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಊರಿಗೆ ರಾಜ್ಯಕ್ಕೆ ಹೊರಟಿದ್ದಾರೆ. ಆದರೂ ಸೀಟು ದೊರೆಯದೆ ಮಧ್ಯಾಹ್ನದವರೆಗೂ ಕಾಯಬೇಕಾಯಿತು.

ಮಹಿಳೆಯರು ತಮ್ಮ ಮಕ್ಕಳು ಹಾಗೂ ಲಗೇಜುಗಳೊಂದಿಗೆ ಬಸ್‌ನಿಲ್ದಾಣಗಳಲ್ಲಿ ಬೀಡುಬಿಟ್ಟಿರುವುದು ಕಂಡುಬಂತು. ರೈಲು ನಿಲ್ದಾಣದಲ್ಲಿ ಇದಕ್ಕಿಂತ ಪರಿಸ್ಥಿತಿ ಭಿನ್ನವಾಗಿರಲಿಲ್ಲ.

ಖಾಸಗಿ ಬಸ್‌ನವರು ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಟಿಕೆಟ್ ದರವನ್ನು ೩-೪ ಪಟ್ಟು ಹೆಚ್ಚಿಸಿ, ಪ್ರಯಾಣಿಕರನ್ನು ಶೋಷಿಸುತ್ತಿದ್ದರು. ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ದರ ನೀಡಿ ಪ್ರಯಾಣಿಸುತ್ತಿದ್ದರು.

Write A Comment