ಕರ್ನಾಟಕ

ಮೊಬೈಲ್‍ ನಲ್ಲಿ ಮೆಸೇಜ್ ಚೆಕ್ ಮಾಡಿದ್ದಕ್ಕೆ ಗಂಡನ 3 ಬೆರಳು ಕಟ್ ಮಾಡಿದ ಪತ್ನಿ !

Pinterest LinkedIn Tumblr

fingers cut

ಬೆಂಗಳೂರು: ಮಹಿಳೆಯೊಬ್ಬಳು ತನ್ನ ಗಂಡ ಮೊಬೈಲ್‍ನಲ್ಲಿ ಮೆಸೇಜ್ ಚೆಕ್ ಮಾಡಿದ ಕಾರಣಕ್ಕೆ ಆತನ ಮೂರು ಬೆರಳುಗಳನ್ನು ಕತ್ತರಿಸಿರುವ ಘಟನೆ ನಗರದ ಹೆಚೆಸ್‍ಆರ್ ಲೇಔಟ್‍ನ ಸರ್ಜಾಪುರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಚಂದ್ರಕಾಂತ್ ಸಿಂಗ್ ಎಂಬವರ ಪತ್ನಿ ಸುನಿತಾ ಎಂಬಾಕೆಯಿಂದ ಕೃತ್ಯ ನಡೆದಿದೆ. ಟೀಚರ್ ಆಗಿ ಕೆಲಸ ಮಾಡುತ್ತಿರುವ ಸುನಿತಾ ಸಿಂಗ್ ಸದಾ ಮೊಬೈಲ್‍ನಲ್ಲಿ ಬ್ಯುಸಿಯಾಗಿರುತ್ತಿದ್ದರಿಂದ ಪತಿ ಚಂದ್ರಕಾಂತ್ ಆಕೆಯ ಮೊಬೈಲ್ ಕೆಲ ದಿನಗಳ ಹಿಂದೆ ಚೆಕ್ ಮಾಡಿದ್ರು. ಇದರಿಂದ ಕೋಪಗೊಂಡು ಸುನಿತಾ ಗಂಡನ ಬೆರಳುಗಳನ್ನೇ ಕತ್ತರಿಸಿದ್ದಾಳೆ.

ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಚಂದ್ರಕಾಂತ್‍ಗೆ ಪತ್ನಿಯಿಂದ ಜೀವಬೆದರಿಕೆಯೂ ಇರುವ ಕಾರಣ ಇದೀಗ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಬೆರಳು ಕಟ್ ಆಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಹೆಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ.

Write A Comment