ಮನೋರಂಜನೆ

ಎಬಿಡಿ-ವಿರಾಟ್ ಶತಕದಬ್ಬರ ಬ್ಯಾಟಿಂಗ್ ಗೆ ಟ್ವೀಟರಿಗರಿಂದ ಪ್ರಶಂಸೆ

Pinterest LinkedIn Tumblr

ab-de-villiers-virat-kohli

ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಗುಜರಾತ್ ಲಯನ್ಸ್ ಬೌಲರ್ ಗಳ ಮೇಲೆ ಬಿರುಗಾಳಿಯಂತೆ ಮುಗಿಬಿದ್ದಿದ್ದರು. ಈ ಇಬ್ಬರು ಸೇರಿ ಅತ್ಯಧಿಕ 229 ರನ್ ಸಿಡಿಸಿದ್ದರು. ಇದರೊಂದಿಗೆ ನಿಗದಿತ ಓವರ್ ನಲ್ಲಿ ಆರ್ಸಿಬಿ 248 ರನ್ ಗಳಿಸಿತ್ತು. ಭರ್ಜರಿ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ತಂಡ 104 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಆರ್ಸಿಬಿ 144 ರನ್ ಗಳ ದಾಖಲೆ ಗೆಲುವು ಪಡೆದಿದ್ದು, ಎಬಿಡಿ-ವಿರಾಟ್ ಶತಕದಬ್ಬರ ಬ್ಯಾಟಿಂಗ್ ಟ್ವೀಟರಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಟ್ವೀಟರಿಗರಿಂದ ಪ್ರಶಂಸೆ
ರೊನಾಲ್ಡೊ-ಮೆಸ್ಸಿ ಒಂದೇ ತಂಡದಲ್ಲಿ ಆಡಿದಂತೆ ಎಬಿಡಿ-ಕೊಹ್ಲಿ ಆಟವಿತ್ತು.
ಎಬಿಡಿ-ಕೊಹ್ಲಿ ಭರ್ಜರಿ ಸಿಕ್ಸರ್-ಬೌಂಡರಿ ಸಿಡಿಸಿದ್ದು, ಪಂದ್ಯದ ಬಳಿಕ ತಂಡದ ಚಿಯರ್ ಲೀಡರ್ ಗಳಿಗೆ ಹೆಚ್ಚುವರಿ ಕೆಲಸದ ಭತ್ಯೆ ನೀಡಬೇಕು.
ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಈಗ ಹೆಲ್ಮೆಟ್ ಗಳನ್ನು ವಿತರಿಸಲಾಗುತ್ತಿದೆ.
ಕೊಹ್ಲಿರ 5 ರನ್ ಮತ್ತು ಎಬಿಡಿಯ 25 ರನ್ ಗಳಿಗೆ ಗುಜರಾತ್ ಲಯನ್ಸ್ ತಂಡ ಶರಣಾಯಿತು.
ವೀಕ್ಷಕರ ವಿವರಣೆ: ಲಯನ್ಸ್ ತಂಡ 44 ರನ್ ಗೆ 4 ವಿಕೆಟ್ ಕಳೆದುಕೊಂಡಿದೆ. ಫಾಲೋಆನ್ ತಪ್ಪಿಸಿಕೊಳ್ಳಲು 5 ರನ್ ಬೇಕಿದೆ.

Write A Comment