
ಹಿರಿಯೂರು: ಅಪಘಾತಕ್ಕೆ ಒಳಗಾದ ಬೈಕ್ ಸವಾರನನ್ನು ರಕ್ಷಿಸಲು ಹೋದವರೇ ಅಪಘಾತದಿಂದ ಸಾವನ್ನಪ್ಪಿದ ಘಟನೆ ಇಲ್ಲಿನ ಐಆರ್ ಬಿ ಟೋಲ್ ಗೇಟ್ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇಂದು ಬೆಳಗಿನ 3-30 ರ ಸಮಯದಲ್ಲಿ ಬೈಕ್ ಸವಾರನೊಬ್ಬ ಅಪಘಾತದಿಂದ ನರಳುತ್ತಿದ್ದ ಅವನನ್ನು ರಕ್ಷಿಸಿಲು ಹೋದ ಐಆರ್ ಬಿ ಟೋಲ್ ಗೇಟ್ ಸಿಬ್ಬಂದಿ ಅವನ ಬೈಕ್ ನ್ನು ವಾಹನಕ್ಕೆ ಹಾಕಿಕೊಳ್ಳವ ಸಂದರ್ಭದಲ್ಲಿ ಹಿಂದಿನಿಂದ ಬಂದ ಕ್ಯಾಂಟರ್ ಒಂದು ಐ ಆಱ್ ಬಿ ಸಿಬ್ಬಂದಿ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ವೆಂಕಟೇಶ್ (23), ಸೂಪರ್ ವೈಸರ್ ನಟರಾಜ್ (45) ಸಾವನ್ನಪ್ಪಿದ್ದಾರೆ.
ತಾಲ್ಲೂಕಿನ ಗುಯಿಲಾಳು ವಾಸಿ ವೆಂಕಟೇಶ್ ಎಂಬ ಯುವಕ ಐ.ಆರ್.ಬಿ ಯಲ್ಲಿ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಗೂ ಐಮಂಗಲ ವಾಸಿಯಾಗಿದ್ದ ನಟರಾಜ್ ಐ.ಆರ್.ಬಿ.ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಇವರು ಕರ್ತವ್ಯ ನಿರ್ವಹಣೆಯ ವೇಳೆ ಬೈಕ್ ಸವಾರನೊಬ್ಬ ಅಪಘಾತಕ್ಕೀಡಾದ ಸುದ್ದಿ ತಿಳಿದು ರಕ್ಷಿಸಲು ಹೋದಾಗ ಈ ಘಟನೆ ಸಂಭವಿಸಿದೆ. ಪ್ರಕರಣ ಹಿರಿಯೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.