ಕರ್ನಾಟಕ

ಆಸ್ತಿ ಆಸೆಗೆ ತಾಯಿಯನ್ನೇ ಕೊಂದ ಮಗ

Pinterest LinkedIn Tumblr

murder-copy

ಕಲಬುರಗಿ: ಆಸ್ತಿ ಆಸೆಗೆ ಮಗನೊಬ್ಬ ಹೆತ್ತ ತಾಯಿಯನ್ನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಜೇವರ್ಗಿ ತಾಲೂಕಿನ ಗೂಗಿಹಾಳ ಗ್ರಾಮದಲ್ಲಿ ನಡೆದಿದೆ.

ಮಲ್ಲಣ್ಣ ಶಿವಣ್ಣ ಹವಾಲ್ದಾರ ಎಂಬಾತನೆ ತನ್ನ ತಾಯಿ ಶರಣಮ್ಮ ಶಿವಣ್ಣ ಹವಾಲ್ದಾರ (65) ಅವರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಶರಣಮ್ಮ ಶಿವಣ್ಣ ಹವಾಲ್ದಾರ ಅವರ ಹೆಸರಿನಲ್ಲಿ 2 ಎಕರೆ ಜಮೀನಿದ್ದು, ಅದನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಹಿರಿಯ ಪುತ್ರ ಮಲ್ಲಣ್ಣ ಶಿವಣ್ಣ ಹವಾಲ್ದಾರ ಕೇಳಿದ್ದಾನೆ. ಅದಕ್ಕೆ ತಾಯಿ ತಾನು ಇರುವವರೆಗೆ ಜಮೀನು ನೀಡುವುದಿಲ್ಲ ಎಂದು ಪಟ್ಟು ಹಿಡಿದ ಕಾರಣಕ್ಕೆ ಮಗ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಲ್ಲಣ್ಣ ಹವಾಲ್ದಾರ ಸಹೋದರ ಶಾಂತಕುಮಾರ ಹವಾಲ್ದಾರ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.

Write A Comment