ಕರ್ನಾಟಕ

ಹತ್ಯೆ ಮಾಡಿ ಮನೆ ಮುಂದೆಯೇ ಶವ ಎಸೆದ ಆರೋಪಿಗಳು

Pinterest LinkedIn Tumblr

murder-copyಮೈಸೂರು: ನಗರದ ಜಯನಗರ ಬಡವಾಣೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು ಶವವನ್ನು ಅವನ ಮನೆಯ ಮುಂದೆಯೇ ಎಸೆದು ಹೋಗಿದ್ದಾರೆ.

ದಿನೇಶ್ (28) ಕೊಲೆಯಾದ ಯುವಕನಾಗಿದ್ದು, ಜಯನಗರ ಮೂರನೇ ಕ್ರಾಸ್ ನಿವಾಸಿಯಾಗಿದ್ದಾರೆ.

ಶುಕ್ರವಾರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಅಪರಿಚಿತ ದುಷ್ಕರ್ಮಿಗಳು ದಿನೇಶ್ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿದ್ದು, ಬಳಿಕ ಶವವನ್ನು ಆತನ ಮನೆ ಮುಂದೆಯೇ ಎಸೆದು ಹೋಗಿದ್ದಾರೆ. ಶನಿವಾರ ಬೆಳಗ್ಗೆ ಶವವನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ ನಂಜನಗೂಡಿಗೆ ಹೋಗುವುದಾಗಿ ಸ್ನೇಹಿತನ ಬೈಕ್‍ನಲ್ಲಿ ಅಶೋಕಪುರಂ ರೈಲ್ವೆ ಸ್ಟೇಷನ್‍ಗೆ ಡ್ರಾಪ್ ತೆಗೆದುಕೊಂಡಿದ್ದರು. ಆದರೆ ಸಂಜೆ ಏಳು ಗಂಟೆ ಸುಮಾರಿಗೆ ಮಾನಂದವಾಡಿ ರಸ್ತೆಯ ಬಳಿ ಇರುವ ಬಾರ್‌ನಲ್ಲಿ ಗೆಳೆಯರೊಂದಿಗೆ ಕುಡಿಯುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ.

ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment