ಕರ್ನಾಟಕ

ಭಾರತ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಟೀಸರ್‍

Pinterest LinkedIn Tumblr

Kabali-20

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರ ಕಬಾಲಿ ಟೀಸರ್‍ನಿಂದಲೇ ಭಾರೀ ಸುದ್ದಿ ಮಾಡುತ್ತಿದೆ. ಟೀಸರ್ ಬಿಡುಗಡೆಯಾಗಿ ಮೂರೇ ದಿನ ಕೋಟಿ ದಾಟಿದ ಕಬಾಲಿ ಈಗ ಭಾರತ ಚಿತ್ರರಂಗದಲ್ಲೇ ಅತಿ ಹೆಚ್ಚು ವೀಕ್ಷಣೆ ಮಾಡಿದ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೌದು. ದಕ್ಷಿಣ ಭಾರತದ ಚಿತ್ರರಂಗದಲ್ಲೇ ಅತಿ ಹೆಚ್ಚು ಸುದ್ದಿ ಮಾಡಿದ್ದ ಚಿತ್ರ ಬಾಹುಬಲಿ. ಆದ್ರೆ ಇದುವರೆಗೂ ಬಾಹುಬಲಿ ದಿ ಬಿಗಿನಿಂಗ್ ಚಿತ್ರದ ಟೀಸರ್ ಅನ್ನು ಇಲ್ಲಿಯವರೆಗೂ 1.39 ಕೋಟಿ ಮಂದಿ ವೀಕ್ಷಣೆ ಮಾಡಿದ್ದರೆ, ಬಿಡುಗಡೆಯಾದ ಒಂದೇ ವಾರಕ್ಕೆ ಕಬಾಲಿ ಟೀಸರ್ ಅನ್ನು ಬರೋಬ್ಬರಿ 1.71 ಕೋಟಿ ಜನ ನೋಡಿದ್ದಾರೆ.

ರಿಯಲ್ ಗ್ಯಾಂಗ್‍ಸ್ಟರ್ ಕಬಾಲೇಶ್ವರನ್ ಕತೆ ಇದಾಗಿದ್ದು, ಕಬಾಲಿಯಾಗಿ ರಜನಿಕಾಂತ್ ಮಿಂಚುತ್ತಿದ್ದಾರೆ. ಇದಲ್ಲದೇ ಚಿತ್ರದಲ್ಲಿ ರಾಧಿಕಾ ಅಪ್ಟೆ, ಕನ್ನಡದ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ. ರಂಜಿತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಜುಲೈ 1ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಮೇ1ಕ್ಕೆ ಬಿಡುಗಡೆಯಾದ ಕಬಾಲಿ ಟೀಸರ್ ಹವಾ ಈಗಲೂ ಮುಂದುವರೆಯತ್ತಲೇ ಇದೆ.

Write A Comment