ಕನ್ನಡ ವಾರ್ತೆಗಳು

ಫೇಸ್ ಬುಕ್ ಪ್ರಣಯ: ಅಪ್ರಾಪ್ತ ವಯಸ್ಕ ಬಾಲಕಿ ಅಪಹರಣದ ಆರೋಪದಲ್ಲಿ ಯುವಕ ಜೈಲುಪಾಲು

Pinterest LinkedIn Tumblr

Love-in-Facebook

ಮಂಗಳೂರು, ಮೇ 13 :  ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಪಹರಿಸಿದ ಆರೋಪದಲ್ಲಿ ನಗರದ ಸ್ಟೇಟ್ ಬ್ಯಾಂಕ್ ಬಳಿಯ ನಿವಾಸಿಯೋರ್ವನನ್ನು ಹಾಗೂ ಆತನಿಗೆ ಸಹಕರಿಸಿದ ಆರೋಪದಲ್ಲಿ ಆತನ ಸ್ನೇಹಿತರಿಬ್ಬರನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸ್ಟೇಟ್ ಬ್ಯಾಂಕ್ ಬಳಿಯ ನಿವಾಸಿ ಕಬೀರ್ (24), ಕಂದುಕದ ಶಾಕೀರ್ (24) ಮತ್ತು ಅಜರ್ (23) ಎಂದು ಹೆಸರಿಸಲಾಗಿದೆ.

ಕಬೀರ ಭಿನ್ನಕೋಮಿನ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡು, ಕಳೆದೊಂದು ವರ್ಷದಿಂದಲೂ ಆಕೆಯೊಂದಿಗೆ ಚಾಟಿಂಗ್ ನಡೆಸುತ್ತಿದ್ದ. ಮೇ 9ರಂದು ಬಾಲಕಿಯನ್ನು ಪುಸಲಾಯಿಸಿ ತನ್ನೊಂದಿಗೆ ಕರೆದೊಯ್ದಿದ್ದ ಕಬೀರ್ ಮರುದಿನ ವಾಪಸಾಗಿದ್ದ ಇತರ ಇಬ್ಬರು ಆರೋಪಿಗಳು ಆತನಿಗೆ ಸಹಕರಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಬಾಲಕಿಯ ಹೆತ್ತವರು ಪೊಲೀಸ್ ದೂರು ಸಲ್ಲಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡ ಮಹಿಳಾ ಠಾಣಾ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Write A Comment