ಕನ್ನಡ ವಾರ್ತೆಗಳು

ಪುತ್ತೂರು : ಗಾಳಿ ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಉರುಳಿ ಮೆಸ್ಕಾಂಗೆ 14 ಲಕ್ಷ ರೂ. ನಷ್ಟ

Pinterest LinkedIn Tumblr

electricity

ಪುತ್ತೂರು, ಮೇ 13 : ಮೊದಲ ಮಳೆಗೆ ಪುತ್ತೂರು ಮೆಸ್ಕಾಂ ವಿಭಾಗದ ಸುಳ್ಯ, ಪುತ್ತೂರು, ಕಡಬ ಉಪವಿಭಾಗಕ್ಕೆ ಒಟ್ಟು 14ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ವಿಭಾಗ ಕಾರ್ಯಪಾಲಕ ಇಂಜಿನಿಯರ್ ನಾರಾಯಣ ಪೂಜಾರಿ ತಿಳಿಸಿದ್ದಾರೆ.

ಗಾಳಿ-ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಉರುಳಿ ಬಿದ್ದಿವೆ. ಇದರಿಂದ ಒಟ್ಟು 60 ಕಂಬ ಉರುಳಿ ಬಿದ್ದಿವೆ. ಕಡಬ-ಸುಬ್ರಹ್ಮಣ್ಯ ನಡುವೆ 60 ವಿದ್ಯುತ್ ಕಂಬ ಮುರಿದು ಬಿದ್ದರೆ, ಪುತ್ತೂರು ಉಪವಿಭಾಗದಲ್ಲಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಿದ್ದಿದೆ. ವಿದ್ಯುತ್ ಕಂಬಕ್ಕೆ ಹಾನಿಯಾಗಿಲ್ಲ.

ಮುಂಗಾರು ಪೂರ್ವ ಮಳೆಗೆ ಪ್ರತಿವರ್ಷ ಮೆಸ್ಕಾಂಗೆ ಹಾನಿ ಸಂಭವಿಸುತ್ತದೆ. ಅರಣ್ಯ ಪ್ರದೇಶದ ನಡುವೆ ವಿದ್ಯುತ್ ಲೈನ್ ಹಾದುಹೋಗುವ ಕಂಬ, ವಿದ್ಯುತ್ ತಂತಿಗಳು ಹಾನಿಗೆ ಒಳಗಾಗುತ್ತವೆ. ಪುತ್ತೂರು 110 ಕೆವಿ, ಸುಳ್ಯ ತಾಲೂಕಿನ 11ಕೆವಿ ಸಾಮರ್ಥ್ಯದ 19 ಫೀಡರ್‌ಗಳಲ್ಲಿ ಬುಧವಾರ ರಾತ್ರಿ ತಾಂತ್ರಿಕ ತೊಂದರೆ ಕಾರಣದಿಂದ ವಿದ್ಯುತ್ ಕಡಿತವಾಗಿತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ಎಲ್ಲಾ ಫೀಡರ್‌ಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Write A Comment