ಕನ್ನಡ ವಾರ್ತೆಗಳು

ತಲೆನೋವನ್ನು ಕಡೆಗಣಿಸದಿರಿ ಮೆದುಳುಗಡ್ಡೆಯಾದೀತು ಜೋಕೆ.

Pinterest LinkedIn Tumblr

headaches

ಬೆಂಗಳೂರು,ಮೇ.13 : ಬದಲಾಗುತ್ತಿರುವ ದಿನಗಳು ಮತ್ತು ಮಲಿನಗೊಳ್ಳುತ್ತಿರುವ ವಾತಾವರಣ ಹಾಗೂ ಬದಲಾದ ನಮ್ಮ ದಿಚರಿಯ ಪರಿಣಾಮವಾಗಿ ಮನುಷ್ಯನಿಗೆ ಬಹು ಬೇಗ ಖಾಯಿಲೆಗಳು ಅಂಟಿಕೊಂಡುಬಿಡುತ್ತಿವೆ.ಇತ್ತೀಚೆಗೆ ಭಾರತದಲ್ಲಿ ಬಹಳಷ್ಟು ಜನರು ಬಳಲುತ್ತಿರುವ ಖಾಯಿಲೆ ಎಂದರೆ ಮೆದುಳು ಗಡ್ಡೆ.

ಮೆದುಳಿನ ಗಡ್ಡೆ ಉಂಟಾದರೆ ಮೊದಲಿಗೆ ತಲೆ ನೋವು ಉಂಟಾಗುತ್ತದೆ, ರೋಗಗ್ರಸ್ತವಾಗುವಿಕೆ, ವ್ಯಕ್ತಿಯ ಸ್ನಾಯುಗಳಲ್ಲಿ ಅನೈಚ್ಛಿಕ ಚಲನೆ ಉಂಟಾಗುತ್ತದೆ. ಮನಸ್ಸಿನಲ್ಲಿ ತಳಮಳ ಹೆದರಿಕೆ ಉಂಟಾಗಬಹುದು,ಸ್ನಾಯುಗಳ ಕುಗ್ಗುವಿಕೆಯಿಂದ ಸೆಳೆತ ಉಂಟಾಗಬಹುದು, ಹಾಗೂ ತಲೆಸುತ್ತು ಉಂಟಾಗುತ್ತದೆ,

ದೇಹದ ಕಾರ್ಯಗಳನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಉಸಿರಾಟದ ಸಮಸ್ಯೆ, ಕಿವಿನೋವು, ಆಗಾಗ ಸಣ್ಣನೆಯ ಜ್ವರ ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯ ದೇಹದ ಬಣ್ಣ ನೀಲಿ ಬಣ್ಣಕ್ಕೆ ತಿರುತ್ತದೆ. ವ್ಯಕ್ತಿ ನಿದ್ದೆಯ ಮಂಪರಿನಲ್ಲಿ ಇರುತ್ತಾನೆ. ವಾಕರಿಕೆ, ವಾಂತಿ, ಹಾಗೂ ವ್ಯಕ್ತಿಯ ವರ್ತನೆ ಹಾಗೂ ಆತನ ಜ್ಞಾಪನದಲ್ಲಿ ಬದಲಾವಣೆಗಳು ಉಂಟಾಗುತ್ತದೆ.

ಮೆದುಳು ಗಡ್ಡೆ ಇರುವ ನಿರ್ದಿಷ್ಟ ಸ್ಥಳದಲ್ಲಿ ಒತ್ತಡ ಹಾಗೂ ತಲೆ ನೋವು ಇರುತ್ತದೆ. ಸೋಮಾರಿತನ,ಸ್ನಾಯು ದೌರ್ಬಲ್ಯ ಅಥವಾ ಪಾರ್ಶ್ವವಾಯು ಸೇರಿದಂತೆ ದೃಷ್ಟಿ ದೋಷ ಉಂಟಾಗುತ್ತದೆ.
ಬ್ರೈನ್ ಟ್ಯೂಮರ್ ಎಂದು ಹೇಳುವ ಈ ಮೆದುಳಿನ ಗಡ್ಡೆಯ ಪ್ರಮುಖ ಲಕ್ಷಣ ತಲೆ ನೋವು.ತಲೆ ನೋವನ್ನು ನಿರ್ಲಕ್ಷ್ಯ ಮಾಡದಿರಿ. ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಒಳ್ಳೆಯದು.

Write A Comment