ಕರ್ನಾಟಕ

ಜ್ವಲಂತ ಸಮಸ್ಯೆಯ ಸುಳಿ ಬಿಡುಗಡೆಗೆ ಸಜ್ಜು

Pinterest LinkedIn Tumblr

suli

ಬಹಳ ದಿನಗಳ ನಂತರ ಪ್ರಣಯರಾಜ ಶ್ರೀನಾಥ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ “ಸುಳಿ” ಚಿತ್ರ ಚಿತ್ರೀಕರಣ ಪೂರೈಸಿ ಬಿಡುಗಡೆಗೆ ಸಜ್ಜಾಗಿದೆ. ಹಿರಿಯ ನಿರ್ದೇಶಕ ಪಿ.ಎಚ್.ವಿಶ್ವನಾಥ್ ನಿರ್ದೇಶನದ ಈ ಚಿತ್ರಕ್ಕೆ ಗೀತಾ ಶ್ರೀನಾಥ್ ಮತ್ತು ಟಿ.ಎಸ್ ಸತ್ಯನಾರಾಣಯ ಬಂಡವಾಳ ಹಾಕಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಶ್ರೀನಾಥ್, ಮಾನಸ ಸರೋವರ ಚಿತ್ರದ ಬಳಿಕ ಪಾತ್ರಕ್ಕಾಗಿ ಮನಸ್ಸು ತುಡಿಯುತ್ತಿತ್ತು,ಅಂತಹ ಅವಕಾಶ ಈಗ “ಸುಳಿ”ಯಲ್ಲಿ ಸಿಕ್ಕಿದೆ.

ಜ್ವಲಂತ ಸಮಸ್ಯೆಯ ಹಿನ್ನೆಲೆಯಿರುವ ಈ ಚಿತ್ರದ ಕಥೆ ಕೇಳಿದಾಕ್ಷಣ ನಟಿಸಲು ಒಪ್ಪಿಕೊಂಡೆ,ಯಾವುದೇ ಸಂಪರ್ಕವಿಲ್ಲದ ಗ್ರಾಮದಲ್ಲಿ ಬೆಳೆದ ಅಡಕೆ ಮೆಣಸು,ಏಲಕ್ಕಿ,ಕಾಫಿ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಅದರಲ್ಲಿ ಸಂಸಾರ ನಡೆಸುವ ಮುಸ್ಲಿಂ ಸಮುದಾಯದ ವ್ಯಕ್ತಿಯ ಪಾತ್ರ. ಮೂಕ ಮಗಳಿಗೆ ಮದುವೆ ಮಾಡಬೇಕೆಂಬ ಹಂಬಲದಲ್ಲಿ ಅಪರಿಚಿತ ಹುಡುಗನಿಗೆ ಮದುವೆ ಮಾಡಿಕೊಡುತ್ತಾನೆ.

ಅಲ್ಲಿಂದ ಮುಂದೆ ಏನಾಗಲಿದೆ ಎನ್ನುವುದು ಪಾತ್ರದ ತಿರುಳು. ಒಳ್ಳೆಯ ಪಾತ್ರ ಸಿಕ್ಕಿದೆ ಎಂದು ಹೇಳಿಕೊಂಡರು.

ನಿರ್ಮಾಪಕಿ ಗೀತಾ ಶ್ರೀನಾಥ್,ಸುಳಿಯ ಕಥೆ ಕೇಳಿ ಇಷ್ಟವಾಯಿತು ಹಾಗಾಗಿ ನಿರ್ಮಾಣ ಮಾಡಲು ಮುಂದಾದೆವು ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರೆ ಮತ್ತೊಬ್ಬ ನಿರ್ಮಾಪಕ ಟಿ.ಎಸ್ ಸತ್ಯನಾರಾಯಣ ಒಳ್ಳೆಯ ಪ್ರಯತ್ನದಲ್ಲಿ ಭಾಗಿಯಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು.

ನಿರ್ದೇಶಕ ಪಿ.ಎಚ್ ವಿಶ್ವನಾಥ್,ನಿಜ ಜೀವನಕ್ಕೆ ಹತ್ತಿರವಾದ ಕಥೆ ಇದು. ಉದ್ಯೋಗದ ಆಸೆಗೆ ಬಿದ್ದ ಯುವಕರನ್ನು ಹೇಗೆಲ್ಲಾ ಸಮಸ್ಯಗೆ ಸಿಲುಕಿಸುರೆ ಎನ್ನುವ ಕುರಿತ ಚಿತ್ರ ಇದು. ಹೊಸ ಅವಕಾಶಗಳನ್ನು ಬೆನ್ನತ್ತಿ ಹೋದರೆ ಏನೆಲ್ಲಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.ಅದಕ್ಕೆ ಆತಂಕವಾದ ಸ್ಪರ್ಶ ನೀಡಲಾಗಿದೆ ಎಂದು ಹೇಳಿಕೊಂಡರು.

ನಟಿ ಪ್ರಗತಿ, ನಟನೆಯ ಯಾವುದೇ ಗಂಧ ಗಾಳಿಯಲ್ಲ. ನಿರ್ದೇಶಕರು ಹೇಳಿದಂತೆ ನಡಿಸಿದ್ದೇನೆ. ನಾನು ಸ್ವಭಾವತಃ ಬಾಯಿ ಬಡಕಿ ಇದರಲ್ಲಿ ಮೂಗಿಯ ಪಾತ್ರ ನೀಡಲಾಗಿದೆ.ಒಳ್ಳೆಯ ಪಾತ್ರ ಸಿಕ್ಕಿದೆ ಎಂದು ಸಂತಸವ್ಯಕ್ತಪಡಿಸಿದರು. ನಟ ಜಯರಾಮ್ ನೀನಾಸಂ,ಅದ್ವಿತಿ,ಆಶ್ವಿತಿ ಸೇರಿದಂತೆ ಕಲಾವಿದರು ತಮ್ಮ ಪಾತ್ರದ ಬಗ್ಗೆ ವಿವರ ಹಂಚಿಕೊಂಡರು.

Write A Comment