ಕರ್ನಾಟಕ

ಸುಲಿಗೆಕೋರನ ಬಂಧನ

Pinterest LinkedIn Tumblr

crime

ಬೆಂಗಳೂರು: ನೈಸ್ ರಸ್ತೆ ಹಾಗೂ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವವರ ಸುಲಿಗೆ ಹಾಗೂ ಬೈಕ್ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಗಿರಿನಗರ ಪೊಲೀಸರು ಎರಡೂವರೆ ಲಕ್ಷ ಮೌಲ್ಯದ 3 ಬೈಕ್, 1 ಆಟೊ, 5 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಭುವನೇಶ್ವರಿ ನಗರದ ಮಾಣಿಕ್ಯ ಅಲಿಯಾಸ್ ಮಣಿಕಂಠ (21) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ತಲೆ ಮರೆಸಿಕೊಂಡಿರುವ ಶಿವಪ್ರಸಾದ್, ಶ್ರೀಕಾಂತ, ಡೋಬಿ ಮಹೇಶ ಹಾಗೂ ಸಚಿನ್ ಅವರ ಜೊತೆ ಸೇರಿ ಬೆಸ್ಟ್ ಕ್ಲಬ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರನ್ನು ಅಡ್ಡ ಗಟ್ಟಿ ಚಾಕು ತೋರಿಸಿ ಬೆದರಿಸಿ 20 ಸಾವಿರ ನಗದು, 1 ಚಿನ್ನದ ಉಂಗುರ, ಪಲ್ಸರ್ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದರು.

ಇದಲ್ಲದೆ ತುರಹಳ್ಳಿ ಫಾರೆಸ್ಟ್ ಬಳಿ ನಿಲ್ಲಿಸಿದ್ದ 2 ಬೈಕ್‌ಗಳನ್ನು ಆರ್‌ಟಿ ನಗರದ ಬೆಸ್ಕಾಂ ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ ಜಯನಗರದಲ್ಲಿ ಆಟೊ ಹಾಗೂ ಗಿರಿನಗರದ ಮನೆಯೊಂದರಲ್ಲಿ ಮೊಬೈಲ್‌ಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗಿದ್ದು, ಆರೋಪಿಯು ಹಿಂದೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕಳ್ಳತನ ಮಾಡಿರುವುದು ಪತ್ತೆಯಾಗಿದೆ ಎಂದು ಡಿಸಿಪಿ ಲೋಕೇಶ್ ಕುಮಾರ್ ತಿಳಿಸಿದ್ದಾರೆ.

Write A Comment