ಕರ್ನಾಟಕ

’ಜಗ್ಗುದಾದ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್‌ಗೆ ಮೈಸೂರು ಹುಲಿ ಎಂಬ ಹೊಸಬಿರುದು

Pinterest LinkedIn Tumblr

darshan

ಅಭಿಮಾನಿಗಳಿಗೆ ಛಾಲೆಜಿಂಗ್ ಸ್ಟಾರ್, ಗಾಂಧಿನಗರದವರಿಗೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಸಿಕೊಂಡಿರುವ ದರ್ಶನ್‌ಗೆ ಮೈಸೂರು ಹುಲಿ ಎಂಬ ಹೊಸಬಿರುದನ್ನು ನೀಡಲಾಗಿದೆ. ’ಜಗ್ಗುದಾದ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಆದಿತ್ಯ ದರ್ಶನ್‌ಗೆ ಮೈಸೂರು ಹುಲಿ ಎಂದು ಮೈಸೂರಿನಲ್ಲಿ ಯಾರೇ ಇದ್ದರೂ ಒನ್ ಅಂಡ್ ಓನ್ಲಿ ದರ್ಶನ್ ಮೈಸೂರು ಹುಲಿ ಎಂದು ಹೊಗಳಿದರು.

ಇದಕ್ಕೆ ದರ್ಶನ್ ಕಿರುನಗೆಯಲ್ಲೆ ಸಮ್ಮತಿಸಿದರು. ತಾರಾ, ಗೋವಿಂದರಾಜು ಇನ್ನಿತರ ಗಣ್ಯರಿಂದ ಒಂದೊಂದು ಹಾಡನ್ನು ತೆರೆ ಮೇಲೆ ಬಿಡುಗಡೆಗೊಳಿಸದ ನಂತರ ಮಾತನಾಡಿದ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಸದ್ಯ ಚಿತ್ರದ ರೀರೆರ್ಕಾಡಿಂಗ್ ಕೆಲಸ ನಡಿಯುತ್ತಿದೆ.

ಅಣ್ಣನ ಜೊತೆ ೧೯ನೇ ಸಿನಿಮಾ. ನೀವು ನೋಡದೆ ಇರುವ ದರ್ಶನ್‌ರನ್ನು ಚಿತ್ರದಲ್ಲಿ ಕಾಣಬಹುದು ಎನ್ನುತ್ತಾರೆ.

ದರ್ಶನ್ ನಮಗೆ ಸಾಕಷ್ಟು ಬೆಂಬಲ ನೀಡಿದ್ದಾರೆ ಚಿತ್ರದ ಎಲ್ಲಾ ಹಂತಗಳಲ್ಲೂ ನಮಗೆ ಮಾರ್ಗದರ್ಶನ ಮಾಡಿ ಉತ್ತಮ ಸಿನಿಮಾ ಆಗುವಂತೆ ನೋಡಿಕೊಂಡಿದ್ದಾರೆ. ಹಣದ ಸಮಸ್ಯೆ ಬಂದಾಗ ಹೆದರಬೇಡಿ, ನಾನಿದ್ದೇನೆ ಎನ್ನುವ ಧೈರ್ಯ ತುಂಬಿದ ದರ್ಶನ್ ನಮ್ಮ ಪಾಲಿಗೆ ಬಂಗಾರದ ಮನುಷ್ಯ ಎಂದರು ಕತೆ,ನಿರ್ದೇಶನ,ನಿರ್ಮಾಣ ಮಾಡಿರುವ ರಾಘವೇಂದ್ರಹೆಗ್ಗಡೆ.

ಗೆಳೆಯ ಪ್ರಾರಂಭದಿಂದಲೂ ನನಗೆ ಪ್ರೋತ್ಸಾಹ ನೀಡುತ್ತಾ, ಚಿತ್ರದಲ್ಲಿ ಉತ್ತಮ ಪಾತ್ರ ನೀಡಿದ್ದಾರೆ. ನಿರ್ಮಾಪಕರು ಜಗ್ಗು ಇಂಟರ್‌ನ್ಯಾಷನಲ್ ಹೋಟೆಲ್ ತೆರೆಯುವುದು ಖಚಿತ ಎಂದರು ಟಾಕಿಂಗ್ ಸ್ಟಾರ್ ಸೃಜನ್‌ಲೋಕೇಶ್.

ನಾಯಕಿ ದೀಕ್ಷಾಸೇಠ್ ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಿಕಾಕಾಮಯ್ಯ ದರ್ಶನ್ ವೃತ್ತಿಪರತೆಯನ್ನು ಕೊಂಡಾಡಿದರು. ಗೋವಿಂದಣ್ಣರಿಂದ ಕ್ರೀಮ್ ಬಿಸ್ಕಟ್ ನೋಡುವ ಭಾಗ್ಯ ಸಿಕ್ಕಿತ್ತು. ನಾಯಕನಾಗಿ ನಾನಿದ್ದರೂ ಇಡೀ ಸಿನಿಮಾ ಆವರಿಸಿಕೊಂಡಿರುವುದು ಸೃಜನ್ ನಟನೆ.

ನಾನು ಕೇವಲ ಕಾಮಿಡಿ ಪೀಸ್ ಅಷ್ಟೆ. ಒಂದು ದಿನ ಪ್ಯಾಚ್‌ಅಪ್ ಕೆಲಸ ಮಾಡಲಾಗಿದೆ. ಅದಕ್ಕೆ ಕಾರಣ ಸ್ಥಳದಲ್ಲೆ ಸಂಕಲನ ಮಾಡಿದ್ದು ಉಪಯೋಗವಾಗಿದೆ. ಎಲ್ಲಾ ನಿರ್ಮಾಪಕರು ಇದನ್ನು ಅಳವಡಿಸಿಕೊಂಡರೆ ಉಳಿತಾಯವಾಗುತ್ತದೆ.

ಒಬ್ಬ ರೌಡಿ ಮದುವೆಯಾಗಲು ಮನಸ್ಸು ಮಾಡಿ ಹುಡುಗಿಯನ್ನು ಹೇಗೆ ಬಲೆಗೆ ಬೀಳಿಸಿಕೊಳ್ಳುತ್ತಾನೆ ಎಂಬುದನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ. ಸ್ನೇಹದಿಂದ ದೀಪಿಕಾಕಾಮಯ್ಯ, ರಚಿತಾರಾಂ ನಟಿಸಿದ್ದಾರೆ ಎಂದರು ದರ್ಶನ್.

ಅಂದಹಾಗೆ ಚಿತ್ರದಲ್ಲಿ ಯೋಗರಾಜ್ ಭಟ್ ಸಾಹಿತ್ಯ ನೀಡಿರುವ ತಲೆ ಕೆಡುತ್ತೆಯನ್ನು ಸೋನು ನಿಗಂ,ಚೇತನ್‌ಕುಮಾರ್ ಬರೆದಿರುವ ಜಗ್ಗು ದುನಿಯಾ ಗೀತೆಯನ್ನು ರಂಜಿತ್ ಸಂತೋಷ್ ಹಾಡಿದ್ದಾರೆ.ಕವಿರಾಜ್ ಬರೆದಿರುವ ವಾಲೆ ಜುಮಕಿಯನ್ನು ಟಿಪ್ಪು ನಾಗೇಂದ್ರ ಪ್ರಸಾದ್ ರಚಿಸಿರುವ ಫನ್‌ಟನಟನ್ ಹಾಡನ್ನು ಹೇಮಂತ್ ಹಾಡಿದ್ದಾರೆ.

Write A Comment