ಕರ್ನಾಟಕ

ಐಎಫ್‍ಎಸ್ ಪಾಸ್ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದ ಶಿವಶಂಕರ್ ! ಬಡತನದ ಬೇಗುದಿಯ ಮಧ್ಯೆ 23ನೇ ವಯಸ್ಸಿನಲ್ಲೇ ಗುರಿ ಸಾಧನೆ

Pinterest LinkedIn Tumblr

ee

ಬೆಂಗಳೂರು: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆಸೆ ಮಾತ್ರ ಬೆಟ್ಟದಷ್ಟು. ಚಿಕ್ಕ ವಯಸ್ಸಿನಲ್ಲೇ ಐಎಎಸ್ ಆಧಿಕಾರಿಯಾಗಬೇಕು ಅನ್ನೂ ಗುರಿ. ಆ ಗುರಿಯನ್ನ ಶಿವಶಂಕರ್ ತಮ್ಮ 23ನೇ ವಯಸ್ಸಿನಲ್ಲೇ ಸಾಧಿಸಿದ್ದಾರೆ.

ಐಎಫ್‍ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 76ನೇ ಶ್ರೇಯಾಂಕ ಬರೋ ಮೂಲಕ ಶಿವಶಂಕರ್ ರಾಜ್ಯಕ್ಕೆ ಕೀರ್ತಿ ತಂದ್ದಿದ್ದಾರೆ. ಈ ಬಾರಿ ಅತಿ ಚಿಕ್ಕ ವಯಸ್ಸಿಗೆ ಅಂದ್ರೆ 23ನೇ ವಯಸ್ಸಿಗೆ ಎಎಫ್‍ಎಸ್ ಪಾಸ್ ಮಾಡಿರುವ ಕಿರಿಯ ಅನ್ನೋ ಹೆಗ್ಗಳಿಕೆಯೂ ಇವರದಾಗಿದೆ. ಐಎಎಸ್ ಬಾಬಾ.ಕಾಂ ಮೂಲಕ ಆನ್‍ಲೈನ್ ಕೋಚಿಂಗ್ ಪಡೆಯುತ್ತಾ ಸಾರ್ವಜನಿಕ ಲೈಬ್ರರಿ ಬಳಸಿಕೊಂಡು ಪರೀಕ್ಷೆ ಎದುರಿಸಿದ್ದರು ಶಿವಶಂಕರ್.

ಇವರ ತಂದೆ ಈಶ್ವರಯ್ಯ ಕೇವಲ ಒಂದು ಚಿಕ್ಕ ವೆಲ್ಡಿಂಗ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದು, ಮಗನ ವಿದ್ಯಾಭ್ಯಾಸದ ಖರ್ಚುನ್ನು ಪರದಾಡಿ ಭರಿಸಿದ್ರು. ಬೆಂಗಳೂರು ಪಿಇಎಸ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿರೋ ಶಿವಶಂಕರ್ ಅತೀ ಚಿಕ್ಕವಯಸ್ಸಿಗೆ ಐಎಫ್‍ಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವುದು ಕುಟುಂಬಕ್ಕೆ ಭಾರೀ ಸಂತಸ ತಂದಿದೆ.

ಅತ್ಯಂತ ಕಿರಿಯ ವಯಸ್ಸಿನಲ್ಲಿ ಜೀವದಲ್ಲಿ ಹತ್ತಾರು ಕಷ್ಟಗಳನ್ನು ಎದುರಿಸಿ ತನ್ನ ಗುರಿಯನ್ನು ಮುಟ್ಟಿರುವ ಶಿವಶಂಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ.

Write A Comment