ಕರ್ನಾಟಕ

ಪ್ರಿಯತಮೆಯ ಪೋಷಕರು ಮದುವೆ ನಿರಾಕರಣೆಗೆ ನೊಂದ ಯುವಕ ಆತ್ಮಹತ್ಯೆ

Pinterest LinkedIn Tumblr

priಚಿಕ್ಕಮಗಳೂರು,ಮೇ 8-ವಿವಾಹಕ್ಕೆ ಪ್ರಿಯತಮೆಯ ಪೋಷಕರು ಒಲ್ಲೆ ಎಂದಿದ್ದಕ್ಕೆ ಯುವಕನೊಬ್ಬ ಮನನೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಲ್ದೂರು ಸಮೀಪದ ಹೊಳಗೇರೆಹಳ್ಳಿಯ ನಿವಾಸಿ ಕೃಷ್ಣೇಗೌಡ(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯ ಮನೆಗೆ ಹೋಗಿ ತಮ್ಮ ಮಗಳನ್ನು ಮದುವೆ ಮಾಡಿಕೊಡುವಂತೆ ಪೋಷಕರನ್ನು ಕೇಳಿದ್ದಾನೆ. ಯುವತಿ ಮನೆಯವರು ಇದಕ್ಕೆ ನಿರಾಕರಿಸಿದ್ದಾರೆ.

ಎರಡನೇ ಬಾರಿಯೂ ಹೋಗಿ ಮದುವೆ ಮಾಡಿಕೊಡುವಂತೆ ಬೇಡಿಕೊಂಡಿದ್ದು, ಆಗಲೂ ಆಕೆಯ ಪೋಷಕರು ಒಪ್ಪದಿದ್ದಾಗ ಇದರಿಂದ ಬೇಸತ್ತ ಯುವಕ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ರೈಲಿಗೆ ಕಣಿವೆ ಹಳಿ ಬಳಿ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment