ಮಾಲ್ಡ(ಪಶ್ಚಿಮಬಂಗಾಳ),ಮೇ 8-ಬಾಂಗ್ಲಾ ಮತ್ತು ಭಾರತ ಗಡಿಯಲ್ಲಿರುವ ಬೈಸ್ನಾಬ್‌ನಗರ್ ಬಳಿ ಭಾರತದೊಳಕ್ಕೆ ಖೋಟಾನೋಟು ಸಾಗಿಸುತ್ತಿದ್ದ ಬಾಂಗ್ಲಾ ಪ್ರಜೆಗಳನ್ನು ಗಡಿಭದ್ರತಾ ಪಡೆ(ಬಿಎಸ್‌ಎಫ್) ಯೋಧರು ಬಂಧಿಸಿ ಸುಮಾರು 50 ಲಕ್ಷ ರೂ. ಮೌಲ್ಯದ ನಕಲಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.
ಮಧ್ಯರಾತ್ರಿ ಯುವಕರಿಬ್ಬರು ಖೋಟಾನೋಟುಗಳೊಂದಿಗೆ ಗಡಿಯಲ್ಲಿ ನುಸುಳುತ್ತಿದ್ದಾಗ ಭದ್ರತಾಪಡೆ ಸಿಬ್ಬಂದಿ ಸುತ್ತುವರಿದು ಅವರನ್ನು ಬಂಧಿಸಿದ್ದಾರೆ ಎಂದು ಬಿಎಸ್‌ಎಫ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ವಶಪಡಿಸಿಕೊಂಡಿರುವ ಎಲ್ಲ ನೋಟುಗಳು 500 ಮತ್ತು 1000 ಮುಖಬೆಲೆ ಹೊಂದಿವೆ. ಈ ನೋಟನ್ನು ಬ್ಯಾಗ್‌ವೊಂದರಲ್ಲಿ ತುಂಬಿಕೊಂಡು ಇವರು ಬರುತ್ತಿದ್ದರು. ನೋಟು ತುಂಬಿದ್ದ ಬ್ಯಾಗ್‌ನ್ನು ಬೈಸ್ನಾಬ್‌ನಗರ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.