ಕರ್ನಾಟಕ

ಯುವಕನಿಗೆ ಇರಿದು ಬರ್ಬರ ಕೊಲೆ

Pinterest LinkedIn Tumblr

kiiilಬೆಂಗಳೂರು,ಮೇ.೮-ಚಾಕುವಿನಿಂದ ಯುವಕನೊಬ್ಬನ ಪಕ್ಕೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ದುರ್ಘಟನೆ ಬನಶಂಕರಿಯ ಕದರೇನಳ್ಳಿ ರಸ್ತೆಯ ಭವಾನಿನಗರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಕುಮಾರಸ್ವಾಮಿ ಲೇಔಟ್‌ನ ಸಚ್ಚಿನ್(೨೪)ಕೊಲೆಯಾದ ಯುವಕನಾಗಿದ್ದಾನೆ,ಮಧ್ಯರಾತ್ರಿ ಕುಮಾರಸ್ವಾಮಿ ಲೇಔಟ್‌ನಿಂದ ಭವಾನಿನಗರಕ್ಕೆ ರೆತಂದಿರುವ ದುಷ್ಕರ್ಮಿಗಳು ಪಕ್ಕೆಗೆ ಚಾಕುವಿನಿಂದ ಇರಿದಿದ್ದಾರೆ.ಚಾಕು ಆಳಕ್ಕೆ ಇಳಿದು ರಕ್ತ ಸೋರುತ್ತಿರುವುದನ್ನು ನಿಲ್ಲಿಸಲು ಅರಿಶಿನ ಹಾಕಿದ್ದಾರೆ.
ಅಲ್ಲದೇ ಬ್ಯಾಂಡೇಜ್ ಮಾಡಲು ಹತ್ತಿ ಕೂಡ ತಂದಿದ್ದು ಸಚ್ಚಿನ್ ಮೃತಪಟ್ಟಿದ್ದರಿಂದ ಅದನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಬೆಳಿಗ್ಗೆ ೪ರ ವೇಳೆ ಯುವಕ ಮೃತಪಟ್ಟಿರುವುದನ್ನು ನೋಡಿದ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಬನಶಂಕರಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಸಚ್ಚಿನ್ ಎಲ್ಲೂ ಕೆಲಸಕ್ಕೆ ಹೋಗದೆ ಯುವಕರ ಜೊತೆ ಓಡಾಡಿಕೊಂಡಿದ್ದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿರುವ ಡಿಸಿಪಿ ಲೋಕೇಶ್‌ಕುಮಾರ್ ಅವರು ಕೊಲೆಯಾಗಿರುವುದನ್ನು ನೋಡಿದರೆ ಪರಿಚಯಸ್ಥರೇ ಕೃತ್ಯವೆಸಗಿರುವ ಶಂಕೆಯಿದೆ ಎಂದು ತಿಳಿಸಿದ್ದಾರೆ.
ಬೇರೆ ಯಾವುದೇ ಕಡೆ ಸಚ್ಚಿನ್‌ಗೆ ಚಾಕುವಿನಿಂದ ಇರಿಯಲಾಗಿದ್ದು ಅಲ್ಲಿ ಆತನಿಗೆ ರಕ್ತ ಸೋರದಂತೆ ಅರಿಶಿನ ಮೆತ್ತಿ ಪ್ರಥಮ ಚಿಕಿತ್ಸೆ ನೀಡಲು ಯತ್ನಿಸಿದ್ದು ಅದು ಫಲ ನೀಡದೇ ಆತ ಮೃತಪಟ್ಟಿದ್ದರಿಂದ ಮೃತದೇಹವನ್ನು ಭವಾನಿನಗರದ ಬಳಿ ಎಸೆದು ಹೋಗಿರುವ ಸಾಧ್ಯತೆ ಇರಬಹುದು ಹಾಗಾಗಿ ಎಲ್ಲಾ ರೀತಿಯಲ್ಲೂ ತನಿಖೆ ಕೈಗೊಳ್ಳಲಾಗಿದ್ದು ಅದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.

Write A Comment