ಕರ್ನಾಟಕ

ಪತ್ನಿ, ಮಕ್ಕಳ ಸಾವು ನೊಂದ ವ್ಯಕ್ತಿ ಆತ್ಮಹತ್ಯೆ

Pinterest LinkedIn Tumblr

hanging-1

ಕುಣಿಗಲ್, ಮೇ ೮- ತನ್ನ ಪತ್ನಿ ಮತ್ತು ಮಕ್ಕಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯಿಂದ ಬೇಸತ್ತ ವ್ಯಕ್ತಿ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗಾಣಿಮೇಸ್ತ್ರಿಪಾಳ್ಯದಲ್ಲಿ ನಡೆದಿದೆ.
ಗ್ರಾಮದ ಜಗದೀಶ್ (೩೨) ಎಂಬುವರೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಕಳೆದ ಒಂದು ವಾರದ ಹಿಂದೆ ಕೌಟುಂಬಿಕ ಕಲಹದಿಂದ ಮನನೊಂದು ಈತನ ಪತ್ನಿ ಪದ್ಮಮ್ಮ ತನ್ನ ಇಬ್ಬರು ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಕಳೆದ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಪದ್ಮಮ್ಮ ಸಾವನ್ನಪ್ಪಿದರೆ, ಈಕೆಯ ಪುತ್ರಿ ಧನು ಎಂಬ ಬಾಲಕಿ ಬುಧವಾರ ಮೃತಪಟ್ಟಿದ್ದಳು. ನಂತರ ಶುಕ್ರವಾರಪ ಪದ್ಮಮ್ಮರವರ ಪುತ್ರ ಗೌತಮ್ ಸಹ ಕೊನೆಯುಸಿರೆಳೆದಿದ್ದನು.
ಈ ಘಟನೆಯಿಂದ ಬೇಸತ್ತ ಜಗದೀಶ್ ಇಂದು ಮುಂಜಾನೆ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Write A Comment