ಕರ್ನಾಟಕ

ಫೈನಾನ್ಷಿಯರ್ ಕೊಲೆ ಪ್ರಕರಣ : ಎರಡನೆ ಪತ್ನಿ ಸೇರಿದಂತೆ 5 ಮಂದಿ ಬಂಧನ

Pinterest LinkedIn Tumblr

killಬೆಂಗಳೂರು, ಮೇ 7-ಮೂರು ವರ್ಷದ ಹಿಂದೆ ನಡೆದಿದ್ದ ಫೈನಾನ್ಷಿಯರ್ ಕೊಲೆ ಪ್ರಕರಣವನ್ನು ಬೇಧಿಸಿರುವ ಸೆಂಟ್ರಲ್ ಠಾಣೆ ಪೊಲೀಸರು ಈತನ ಎರಡನೆ ಪತ್ನಿ ಸೇರಿದಂತೆ 5 ಮಂದಿಯನ್ನು ಬಂಧಿಸಿದ್ದಾರೆ. ವೀಣಾ, ರಾಘವೇಂದ್ರ, ಶೇಖರ್, ಸಂಜಯ್ ಮತ್ತು ಗಣೇಶ್ ಬಂಧಿತ ಆರೋಪಿಗಳು. ಪಾರ್ವತಿಪುರದಲ್ಲಿ ವಾಸವಾಗಿದ್ದ ವಾಸು (43) ಎಂಬುವರು ಫೈನಾನ್ಸ್ ನಡೆಸುತ್ತಿದ್ದರು. 2013ರ ಏಪ್ರಿಲ್ 10 ರಂದು ಇವರು ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಸ್ವಾಭಾವಿಕ ಸಾವೆಂದು ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಸೆಂಟ್ರಲ್ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ದೊರೆತ ಮಾಹಿತಿ ಮೇರೆಗೆ ವಾಸುವನ್ನು ಕೊಲೆ ಮಾಡಲಾಗಿದೆ ಎಂಬ ಅಂಶ ಗೊತ್ತಾಗಿದೆ. ತಕ್ಷಣ ತನಿಖೆ ಚುರುಕುಗೊಳಿಸಿ ವಾಸುವಿನ ಎರಡನೆ ಪತ್ನಿ ವೀಣಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಹಣಕ್ಕಾಗಿ ಸ್ನೇಹಿತರಾದ ರಾಘವೇಂದ್ರ, ಶೇಖರ್, ಸಂಜಯ್ ಮತ್ತು ಗಣೇಶ್ ಜೊತೆ ಸೇರಿ ಅಂದು ಮನೆಯಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಈಕೆಯ ಹೇಳಿಕೆ ಮೇರೆಗೆ ಸ್ನೇಹಿತರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರ.

Write A Comment