ಕರ್ನಾಟಕ

ದುನಿಯಾ ವಿಜಿ ಅಭಿನಯದ ದನ ಕಾಯೋನು ಆಡಿಯೋ, ಟ್ರೇಲರ್ ರಿಲೀಸ್

Pinterest LinkedIn Tumblr

32

ರಾಮನಗರ: ಸ್ಯಾಂಡಲ್‍ವುಡ್‍ನ ದುನಿಯಾ ವಿಜಯ್ ಹಾಗೂ ಪ್ರಿಯಾಮಣಿ ಅಭಿನಯದ ದನ ಕಾಯೋನು ಚಿತ್ರದ ಧ್ವನಿ ಸುರಳಿ ಹಾಗೂ ಟ್ರೇಲರ್‍ನನ್ನು ಜಿಲ್ಲೆಯ ಕನಕಪುರದಲ್ಲಿ ಬಿಡುಗಡೆ ಮಾಡಲಾಯಿತು.

ಚಿತ್ರನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ದನ ಕಾಯೋನು ಚಿತ್ರದ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಿದ್ರು. ಕನಕಪುರದ ಕೆಂಕೇರಮ್ಮ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಆರ್ ಶ್ರೀನಿವಾಸ್ ಹಾಗೂ ಮತ್ತಿತರು ಪಾಲ್ಗೊಂಡಿದ್ರು. ಕೆಂಕೇರಮ್ಮ ಹಾಗೂ ಬಾಣಂತ ಮಾರಮ್ಮ ದೇವಿಯ ಹಬ್ಬದ ಪ್ರಯುಕ್ತ ದನ ಕಾಯೋನು ಚಿತ್ರದ ಧ್ವನಿ ಸುರಳಿಯನ್ನು ಬಿಡುಗಡೆಗೊಳಿಸಲಾಯಿತು.

ಇದೇ ವೇಳೆ ಮಾತನಾಡಿದ ನಿರ್ಮಾಪಕ ಆರ್ ಶ್ರೀನಿವಾಸ್ ಚಿತ್ರದ ಧ್ವನಿ ಸುರಳಿಯನ್ನು ಕನಕಪುರದ ಹಬ್ಬದ ನಿಮಿತ್ತ ಇಲ್ಲಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ರು. ಚಿತ್ರದ ಬಹುಪಾಲು ಕೊಪ್ಪಳದ ಗಂಗವಾಡಿಯ ಬೆಟ್ಟಗುಡ್ಡಗಳಲ್ಲಿ ಚಿತ್ರೀಕರಣ ನಡೆಸಿದ್ದು ದನ ಕಾಯೋನು ಪದದ ಅಪಾರ್ಥ ನಾನಾ ರೀತಿಯಲ್ಲಿ ಜನರು ಅರ್ಥೈಸಿ ಕೊಳ್ತಾ ಇದ್ದು ಅದನ್ನು ತೆಗೆದು ಹಾಕುವ ದೃಷ್ಟಿಯಿಂದ ಹಾಗೂ ಜನ ಸಾಮನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಧ್ವನಿ ಸುರಳಿಯನ್ನು ಬಿಡುಗಡೆ ಮಾಡ್ತಾ ಇರೋದಾಗಿ ನಿರ್ದೇಶಕ ಯೋಗರಾಜ್ ಭಟ್ ಹೇಳಿದರು.

Write A Comment