ಮನೋರಂಜನೆ

ಶಾರೂಖ್ ಖಾನ್ ‘ಫ್ಯಾನ್’ ಗೆ ಎದುರಾಯಿತು ಸಂಕಷ್ಟ!

Pinterest LinkedIn Tumblr

Fan

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ನಟನೆಯ ಫ್ಯಾನ್ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಚಿತ್ರಕ್ಕೆ ಈಗ ಹೊಸ ಸಮಸ್ಯೆ ಎದುರಾಗಿದ್ದು ದೆಹಲಿ ಮೂಲದ ಸಿಹಿ ತಿನಿಸುಗಳ ಅಂಗಡಿಯೊಂದು ಶಾರೂಖ್ ಖಾನ್ ಹಾಗೂ ಫ್ಯಾನ್ ಚಿತ್ರದ ನಿರ್ಮಾಪಕರಿಗೆ ನೊಟೀಸ್ ಜಾರಿ ಮಾಡಿದೆ.

ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ಫ್ಯಾನ್ ಚಿತ್ರದಲ್ಲಿ ಸೂಪರ್ ಸ್ಟಾರ್ ಆರ್ಯನ್ ಖನ್ನಾ ಅವರನ್ನು ಭೇಟಿ ಮಾಡಲು ತೆರಳುವ ಅಭಿಮಾನಿಯೊಬ್ಬ ಸಿಹಿ ತಿನಿಸುಗಳನ್ನು ಕೊಂಡೊಯ್ಯುತ್ತಾನೆ. ಸಿಹಿ ತಿನಿಸುಗಳಿದ್ದ ಬಾಕ್ಸ್ ಮೇಲೆ ಘಂಟೆವಾಲಾ ಎಂಬ ಹೆಸರಿದೆ. ಈ ಹಿನ್ನೆಲೆಯಲ್ಲಿ ಸಿಹಿ ತಿನಿಸುಗಳ ಅಂಗಡಿಯ ಮಾಲೀಕ ಸುಶಾಂತ್ ಜೈನ್ ಚಿತ್ರ ನಿರ್ಮಾಪಕರು, ನಟ ಶಾರೂಖ್ ಖಾನ್ ಗೆ ನೊಟೀಸ್ ಜಾರಿ ಮಾಡಿದ್ದು ಅನುಮತಿ ಇಲ್ಲದೇ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಯಶ್ ರಾಜ್ ಫಿಲ್ಮ್ಸ್, ಆದಿತ್ಯ ಛೋಪ್ರಾ, ನಿರ್ದೇಶಕ ಮನೀಶ್ ಶರ್ಮಾ, ಕಥಾ ರಚನೆಕಾರ ಹಬೀಬ್ ಫೈಸಲ್, ಶರತ್ ಕಠಾರಿಯಾ ಹಾಗೂ ಶಾರೂಖ್ ಖಾನ್ ಗೆ ನೊಟೀಸ್ ಜಾರಿ ಮಾಡಲಾಗಿದೆ. ಸಿಹಿ ತಿನಿಸುಗಳ ಅಂಗಡಿ ಮಾಲೀಕರು ತಮ್ಮ ಅಂಗಡಿಯ ಬ್ರಾಂಡ್ ನ್ನು ಬಳಸಿಕೊಡಿರುವ ಚಿತ್ರದ ಭಾಗವನ್ನು ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.

Write A Comment