ಕರ್ನಾಟಕ

ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಹತ್ಯೆ: 6 ಆರೋಪಿಗಳ ಬಂಧನ

Pinterest LinkedIn Tumblr

crimeಬೆಂಗಳೂರು: 55 ವರ್ಷದ ಸೆಕ್ಯೂರಿಟಿ ಗಾರ್ಡ್ ರಾಮ್ ಚರಿತ್ರಾ ಮುಖಿಯಾ ಹತ್ಯೆ ಪ್ರಕರಣ ಸಂಬಂಧ ಇಂದಿರಾ ನಗರ ಪೊಲೀಸರು ಶನಿವಾರ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಮಾರ್ಚ್ 24ರಂದು ದೊಮ್ಮಲೂರಿನ 2ನೇ ಹಂತದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಮುಖಿಯಾರನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಮಂಜುನಾಥ್ ಹಾಗೂ ಆತನ ಭಾವ ಪುಟ್ಟರಾಜ, ಬಲಮುರಗನ್, ವಿಜಯ್ ಮತ್ತು ರಾಜುನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಎಲ್ಲಾ ಆರೋಪಿಗಳು ಶ್ರೀರಾಂಪುರ ನಿವಾಸಿಗಳಾಗಿದ್ದು, ಎಲ್ಲರೂ 30 ವರ್ಷದ ಆಸುಪಾಸಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment