ರಾಷ್ಟ್ರೀಯ

ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಯುಪಿಎ ಬಹಿರಂಗಪಡಿಸಬೇಕು: ಪರಿಕ್ಕರ್

Pinterest LinkedIn Tumblr

Parrikarಡೆಹ್ರಾಡೂನ್: ಬಹುಕೋಟಿ ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಈ ಹಿಂದಿನ ಯುಪಿಎ ಸರ್ಕಾರ ಬಹಿರಂಗಪಡಿಸಲೇಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಅಗಸ್ಟಾ ಡೀಲ್ ನಲ್ಲಿ ಲಂಚ ಪಡೆದವರ್ಯಾರು ಎಂಬುದು ಈಗ ವಿವಾದಾಸ್ಪದ ಪ್ರಶ್ನೆಗಾಗಿ ಉಳಿದಿದೆ. ವಿವಿಐಪಿ ಹೆಲಿಕಾಫ್ಟರ್ ಒಪ್ಪಂದ ನಡೆದಾಗ ಒಪಂದ ಪೂರ್ಣಗೊಳ್ಳಲು ಕಾರಣವಾದವರು ಈಗ ಉತ್ತರ ನೀಡಲೇ ಬೇಕಾಗಿದೆ. 125 ಕೋಟಿಯಷ್ಟು ಹಣ ನೀಡಲಾಗಿದೆ ಎಂದು ಇಟಾಲಿಯ ಕೋರ್ಟ್ ಹೇಳಿದ್ದು ಕೆಲವು ಹೆಸರುಗಳನ್ನೂ ಬಹಿರಂಗಗೊಳಿಸಿದೆ, ಈ ಬಗ್ಗೆ ಸ್ಪಷ್ಟನೆ ನೀಡುವ ಹೊಣೆಗಾರಿಕೆ ಅಂದಿನ ಸರ್ಕಾರದಲ್ಲಿದ್ದವರಿಗೆ ಇದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಎಷ್ಟು ಲಂಚ ನೀಡಲಾಗಿದೆ ಎಂಬುದು ತನಿಖೆ ಮೂಲಕ ಬಹಿರಂಗವಾಗಲಿದೆ, ಆದರೆ ಯಾವ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು ಹಾಗೂ ಒಂದು ಕಂಪನಿಗೆ ಲಾಭ ಮಾಡಿಕೊಟ್ಟಿರುವುದರ ಬಗ್ಗೆ ಅಂದು ಅಧಿಕಾರದಲ್ಲಿದ್ದವರೇ ಸ್ಪಷ್ಟನೆ ನೀಡಬೇಕೆಂದು ಹೇಳಿದ್ದಾರೆ. ಇದು ಸಂಸತ್ ಗೆ ಸಂಬಂಧಪಟ್ಟಿರುವುದರಿಂದ ಈ ವಿಷಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.

Write A Comment