ಕರ್ನಾಟಕ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಕ್ರವ್ಯೂಹಕ್ಕೆ ಪ್ರೇಕ್ಷಕ ಫಿದಾ

Pinterest LinkedIn Tumblr

Puneet-and-rachita-ram-a (1)ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಚಿತಾರಾಮ್ ಅಭಿನಯದ ಚಕ್ರವ್ಯೂಹ ಸಿನಿಮಾ ರಾಜ್ಯಾದ್ಯಂತ ಶುಕ್ರವಾರ ಬಿಡುಗಡೆಯಾಗಿದ್ದು, ಪ್ರೇಕ್ಷಕ ಮಹಾಪ್ರಭು ಚಕ್ರವ್ಯೂಹಕ್ಕೆ ಫಿದಾ ಆಗಿದ್ದಾರೆ.

ಚಕ್ರವ್ಯೂಹ ರಾಜ್ಯಾದ್ಯಂತ 300 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಬಳ್ಳಾರಿಯಲ್ಲಿ ನಸುಕಿನ ವೇಳೆಯೇ ಸಿನಿಮಾದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಇಂದು ಬೆಳಗ್ಗಿನಿಂದಲೇ ಚಿತ್ರಮಂದಿರದ ಮುಂದೆ ಅಪ್ಪು ಅಭಿಮಾನಿಗಳು ಜಮಾಯಿಸಿದ್ದರು.

ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕ ಸೂಪರ್ ಗುರು ಎಂದು ಹೇಳುವ ಮೂಲಕ ಚಕ್ರವ್ಯೂಹಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪುನೀತ್ ಹಾಗೂ ರಚಿತಾರಾಮ್ ಜೋಡಿ ನಟನೆ, ಪುನೀತ್ ಫೈಟಿಂಗ್, ಡ್ಯಾನ್ಸ್ ಎಲ್ಲವೂ ಸೂಪರ್ ಎಂಬುದು ಪ್ರೇಕ್ಷಕನ ಹೊಗಳಿಕೆ.

ಪುನೀತ್‌ರಾಜ್‌ ಕುಮಾರ್‌ ಹಾಗು ರಚಿತಾರಾಮ್‌ ಅಭಿನಯದ ಈ ಚಿತ್ರವನ್ನು ಸರವಣನ್‌ ನಿರ್ದೇಶಿಸಿದ್ದಾರೆ.
ಲೋಹಿತ್‌ ನಿರ್ಮಾಪಕರು. ಷಣ್ಮುಗ ಸುಂದರಂ ಅವರ ಛಾಯಾಗ್ರಹಣವಿದೆ. ಎಸ್‌.ಎಸ್‌.ತಮನ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಬಾರಕ್‌ ಸಂಕಲನ ಮಾಡಿದರೆ, ಶೋಭಿ, ಶೇಖರ್‌ ನೃತ್ಯ ನಿರ್ದೇಶನ ಮಾಡಿದ್ದಾರೆ.

ಸ್ಟಂಟ್‌ ಶಿವ ಸಾಹಸ ನಿರ್ದೇಶನವಿದೆ. ಚಿತ್ರಕ್ಕೆ ಪ್ರಶಾಂತ್‌ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಕವಿರಾಜ್‌, ಚಂದನ್‌ ಶೆಟ್ಟಿ ಗೀತೆಗಳನ್ನು ರಚಿಸಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ, ಅರುಣ್‌ ವಿಜಯ್‌, ಅಭಿಮನ್ಯುಸಿಂಗ್‌, ಸಿತಾರಾ, ಭವ್ಯಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
-ಉದಯವಾಣಿ

Write A Comment