ಕರ್ನಾಟಕ

ಮಾರಾಮಾರಿಗೆ ಛೀಮಾರಿ: ಬಿಜೆಪಿ,ಕಾಂಗ್ರೆಸ್ ಗಾಂಧಿಗಿರಿ-ದಾದಾಗಿರಿ

Pinterest LinkedIn Tumblr

BBMP-1ಬೆಂಗಳೂರು, ಏ. ೨೯- 2016-17ನೇ ಸಾಲಿನ ಆಸ್ತಿ ತೆರಿಗೆ ಹೆಚ್ಚಳವನ್ನು ರದ್ದು ಪಡಿಸುವಂತೆ ಆಗ್ರಹಪಡಿಸಿ ಬಿಜೆಪಿ ಸದಸ್ಯರು ಇಂದು ಪ್ರತಿಭಟನೆ ನಡೆಸಿದ್ದರ ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗಿ ತಳ್ಳಾಟ ನಡೆದು ಇಡೀ ಬಿಬಿಎಂಪಿ ಸಭೆ ಅಕ್ಷರಶಃ ರಣಾಂಗಣವಾಯಿತು.
ಕೆಳ ಮತ್ತು ಮಧ್ಯಮ ವರ್ಗದ ಜನತೆಗೆ ತೆರಿಗೆ ಹೆಚ್ಚಳ ಮಾರಕವಾಗಿದ್ದು, ಕೂಡಲೇ ಆಸ್ತಿ ತೆರಿಗೆಯನ್ನು ರದ್ದುಪಡಿಸಬೇಕೆಂದು ಪ್ರತಿಪಕ್ಷದ ಬಿಜೆಪಿ ಸದಸ್ಯರು ಆಗ್ರಹಪಡಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಡೀ ಸಭೆ ಕೆಲ ಕಾಲ ಗೊಂದಲ, ಕೋಲಾಹಲದಲ್ಲಿ ಮುಳುಗಿತ್ತು.
ಮೇಯರ್ ಮಂಜುನಾಥರೆಡ್ಡಿ, ಉಪಮೇಯರ್ ಹೇಮಲತಾ, ನೂತನ ಆಯುಕ್ತ ಪ್ರಧಾನ ಸುದ್ದಿ ಮಾರಾಮಾರಿಗೆ ಛೀಮಾರಿ: ಬಿಜೆಪಿ,ಕಾಂಗ್ರೆಸ್ ಗಾಂಧಿಗಿರಿ-ದಾದಾಗಿರಿಮಂಜುನಾಥ ಪ್ರಸಾದ್ ಅವರು ಪಾಲಿಕೆ ಸಭೆಗೆ ಆಗಮಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸರಕಾರ ಮತ್ತು ಬಿಬಿಎಂಪಿ ಆಡಳಿತದ ವಿರುದ್ಧ ಆಕ್ರೋಶದ ದನಿಯಲ್ಲಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೆ, ಮೇಯರ್‌ರವರು ಆಸೀನರಾಗುತ್ತಿದ್ದಂತೆ ಅವರ ಪೀಠದ ಸುತ್ತ ಸುತ್ತುವರಿದು, ತೆರಿಗೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಈ ನಡುವೆ ಕೆಲ ಕಾಂಗ್ರೆಸ್ ಸದಸ್ಯರುಗಳು ಪ್ರತಿಭಟನಾಕಾರರು ಧರಿಸಿದ್ದ ಟೋಪಿಗಳನ್ನು ಆಸ್ತಿ ತೆರಿಗೆ ಇಳಿಸಿ ಟೋಪಿಗಳನ್ನು ಕಿತ್ತುಕೊಳ್ಳುವ ಪ್ರಯತ್ನಗಳನ್ನು ನಡೆಸಿದರು.
ಮೇಯರ್ ಆಸೀನರಾಗಿದ್ದ ಪೀಠದ ಮೇಲಿಂದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಅವಜ್ಞಾನಿಕವಾದ ತೆರಿಗೆ ಹೆಚ್ಚಳವನ್ನು ವಾಪಸು ಪಡೆಯಿರಿ. ಶೇ. 20 ಮತ್ತು ಶೇ. 25 ತೆರಿಗೆಯಲ್ಲೂ ಕೂಡ ಇಳಿಸುವಂತೆ ಒತ್ತಾಯಿಸಿದರು.
ಆಗ ಮಧ್ಯ ಪ್ರವೇಶಿಸಿದ ಮೇಯರ್ ಮಂಜುನಾಥರೆಡ್ಡಿ ಬಿಜೆಪಿ ಸದಸ್ಯರೇ ನೀವು ತಪ್ಪು ಮಾಡುತ್ತಿದ್ದೀರ, ನಿಮ್ಮ ಏನೇ ಸಮಸ್ಯೆ ಇದ್ದರೂ ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ನೀವು ಸ್ವಸ್ಥಾನಕ್ಕೆ ಹೋಗಿ ಕುಳಿತುಕೊಳ್ಳಿ. ಜನತೆಗೆ ತಪ್ಪು ಸಂದೇಶವನ್ನು ತಲುಪಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಬಗ್ಗದ ಪ್ರತಿಭಟನಾಕಾರರು ಇನ್ನೂ ಏರಿದ ದನಿಯಲ್ಲಿ ಸರಕಾರ ಮತ್ತು ಪಾಲಿಕೆ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಕೆಲ ಸಮಯದ ನಂತರ ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣರವರು ಗದ್ದಲ, ಕೋಲಾಹಲದ ನಡುವೆ ಕೆಲ ನಿರ್ಣಯಗಳನ್ನು ಓದಲಾರಂಭಿಸಿದುದು ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿತು.
ಪದ್ಮನಾಭರೆಡ್ಡಿ, ಉಮೇಶ್ ಶೆಟ್ಟಿ ಮತ್ತಿತರ ಸದಸ್ಯರು ಏಕಾಏಕಿ ಸತ್ಯನಾರಾಯಣ ಅವರು ನಿಂತಿದ್ದ ಆಸನದ ಬಳಿಗೆ ತೆರಳಿ ನಿರ್ಣಯದ ಪ್ರತಿಗಳನ್ನು ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸಿದರು.
ಆದರೂ 5 ನಿಮಿಷಗಳಿಗೂ ಹೆಚ್ಚು ಕಾಲ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತಳ್ಳಾಟ ನಡೆಯಿತು. ಈ ನಡುವೆಯೇ ಆಸ್ತಿ ತೆರಿಗೆ ಹೆಚ್ಚಳ ಸೇರಿದಂತೆ 5 ನಿರ್ಣಯಗಳಿಗೆ ಅನುಮೋದನೆ ಪಡೆದುಕೊಳ್ಳುವಲ್ಲಿ ಸತ್ಯನಾರಾಯಣರವರು ಸಫಲರಾದರು.
ಆಗಲೂ ಮೇಯರ್‌ರವರು ಬಿಜೆಪಿ ಸದಸ್ಯರಿಗೆ ಸ್ವಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುವಂತೆ ಪದೇ ಪದೇ ಮನವಿ ಮಾಡಿದರು, ಆದರೂ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಮೇಯರ್ ಮಂಜುನಾಥರೆಡ್ಡಿ ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಿದರು.

Write A Comment