ಅಂತರಾಷ್ಟ್ರೀಯ

ಡಯಟ್, ಜಿಮ್‌ ಅಗತ್ಯವಿಲ್ಲ: ಪ್ರಿಯಾಂಕಾ

Pinterest LinkedIn Tumblr

piggggi_0ಲಾಸ್‌ಏಂಜಲಿಸ್‌ (ಪಿಟಿಐ): ‘ನನಗೆ ಡಯಟ್‌ ಅಗತ್ಯ ಇಲ್ಲ. ಜಿಮ್‌ನಲ್ಲಿ ಕಸರತ್ತು ಮಾಡೋದೂ ನನಗೆ ಇಷ್ಟ ಇಲ್ಲ’ ಎಂದಿದ್ದಾರೆ ಸದ್ಯ ಹಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ ಮೂಲದ ನಟಿ ಪಿಗ್ಗಿ ಅಲಿಯಾಸ್‌ ಪ್ರಿಯಾಂಕಾ ಚೋಪ್ರಾ.

‘ಬೇವಾಚ್‌’ ಇಂಗ್ಲಿಷ್‌ ರಿಮೇಕ್‌ ಚಿತ್ರದಲ್ಲಿ ನಟಿಸುತ್ತಿರುವ 33ರ ಪ್ರಿಯಾಂಕಾಗೆ ಜಿಮ್‌, ಡಯಟ್ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಚಿತ್ರದ ಸಹನಟಿ ಕೆಲ್ಲಿ ರೊಬಾಚ್‌ ಆಕೆಯನ್ನು ಜಿಮ್‌ ಕಸರತ್ತಿಗೆಳೆಯುವ ಪ್ರಯತ್ನ ನಡೆಸಿದ್ದಾರಂತೆ.

‘ನನಗೆ ವರ್ಕೌಟ್‌ನಲ್ಲಿ ಆಸಕ್ತಿ ಇಲ್ಲ. ನಾನು ಸ್ವಾಭಾವಿಕವಾಗಿಯೆ ಫಿಟ್‌ ಆಗಿದ್ದೇನೆ. ಹೀಗಾಗಿ ನನಗೆ ವರ್ಕೌಟ್‌ ಅಗತ್ಯ ಇಲ್ಲ. ಆದ್ರೂ ಕೆಲ್ಲಿ ರೊಬಾಚ್‌ ನನ್ನನ್ನ ಜಿಮ್ ಕಸರತ್ತಿಗೆ ಸೆಳೆಯಲು ಮನವೊಲಿಸೊ ಪ್ರಯತ್ನ ನಡೆಸ್ತಿರ್ತಾಳೆ’ ಎಂಬುದು ಪ್ರಿಯಾಂಕಾ ದೂರು!

‘ಕೆಲ್ಲಿ ಪ್ರತಿ ದಿನ ಬೆಳಿಗ್ಗೆ ನನ್ನನ್ನ ವರ್ಕೌಟ್‌ಗೆ ಕರೆದುಕೊಂಡು ಹೋಗೋ ಪ್ರಯತ್ನ ನಡೆಸಿದಾಗೆಲ್ಲಾ ನಾನು ಆಕೆ ಹೇಳುವುದಿಷ್ಟೆ: ‘ನಾನು ಇನ್ನೊಂದರ್ಧ ಗಂಟೆ ಮಲಗಬಹುದೇ ತಾಯಿ?’ ಅಂತ. ಆಕೆ ಇನ್ನೂ ಬಲವಂತ ಮಾಡಿದ್ರೆ ಹೊಟ್ಟೆ ನೋಯ್ತಿದೆ ಮಾರಾಯ್ತಿ ಎಂದೋ ಇನ್ನೇನೋ ಸಬೂಬು ಹೇಳಿ ನುಣುಚಿಕೊಳ್ತೀನಿ’ ಎಂದಿದ್ದಾರೆ ಪಿಗ್ಗಿ.

‘ನನಗೆ ಡಯಟ್‌ನಲ್ಲೂ ಆಸಕ್ತಿ ಇಲ್ಲ. ನಾಳೆ ದೊಡ್ಡದೊಂದು ಔತಣಕೂಟ ಇದೆ’ ಎಂದಿರುವ ಪ್ರಿಯಾಂಕ ಶೂಟಿಂಗ್‌ ಮಧ್ಯೆ ಬೀಚ್‌ನಲ್ಲಿ ಮೋಜು ಮಾಡೋ ಪ್ಲಾನ್‌ ಕೂಡಾ ಮಾಡಿಕೊಂಡಿಕೊಂಡಿದ್ದಾರಂತೆ.

Write A Comment