ಕರ್ನಾಟಕ

ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಆರೋಪ; ಹೊಂಗನೂರಲ್ಲಿ ಗಲಭೆ: ಲಾಠಿ ಪ್ರಹಾರ

Pinterest LinkedIn Tumblr

28cnr2_0ಚಾಮರಾಜನಗರ: ಡಾ. ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರದ ಫ್ಲೆಕ್ಸ್‌ಗೆ ಕಿಡಿಗೇಡಿಗಳು ಅವಮಾನ ಮಾಡಿದರು ಎಂದು ಪ್ರತಿಭಟಿಸಿ ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗುರುವಾರ ಹಿಂಸಾಚಾರ, ಗಲಭೆ ನಡೆಯಿತು.

ಈ ಸಂದರ್ಭದಲ್ಲಿ ಕಲ್ಲುತೂರಾಟ, ಘರ್ಷಣೆಗೆ ಇಳಿದ ಜನರನ್ನು ನಿಯಂತಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರಲ್ಲದೆ, ಅಶ್ರುವಾಯು ಸಿಡಿಸಿದರು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಅಂಬೇಡ್ಕರ್‌ ಜಯಂತಿ ಅಂಗವಾಗಿ ಅಂಬೇಡ್ಕರ್‌ ಭಾವಚಿತ್ರದ ಫ್ಲೆಕ್ಸ್‌ ಅಳವಡಿಸಲಾಗಿತ್ತು.

ಈ ಫ್ಲೆಕ್ಸ್‌ಗೆ ಬುಧವಾರ ರಾತ್ರಿ ನಾಯಕ ಸಮುದಾಯದ ಕೆಲ ಯುವಕರು ಚಪ್ಪಲಿ ಹಾರ ಹಾಕಿದ್ದಾರೆಂದು ಆರೋಪಿಸಿ ದಲಿತ ಯುವಕರು ಗುರುವಾರ ಬೆಳಿಗ್ಗೆ ಕಲ್ಲು ತೂರಾಟ ನಡೆಸಿದರು. ಇದಕ್ಕೆ ಪ್ರತಿಯಾಗಿ ನಾಯಕ ಸಮುದಾಯದ ಕೆಲ ಯುವಕರೂ ಕಲ್ಲು ತೂರಿದಾಗ ಘರ್ಷಣೆ ಉಂಟಾಯಿತು.

ಇದೇ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಟೀ, ಕಾಫಿ ಅಂಗಡಿ, ಬೈಸಿಕಲ್‌ ಶಾಪ್‌, ಕೋಳಿ ಮಾರಾಟದ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಛಾಯಾಗ್ರಾಹಕರು ಮತ್ತು ವರದಿಗೆ ಹೋಗಿದ್ದ ಪತ್ರಕರ್ತರ ಮೇಲೂ ಕಲ್ಲು ತೂರಲಾಯಿತು.

ಘರ್ಷಣೆಯಲ್ಲಿ 12ಕ್ಕೂ ಹೆಚ್ಚು ಅಂಗಡಿಗಳು, ಒಂದು ಸರಕು ಸಾಗಣೆ ಆಟೊ ಬೆಂಕಿಗೆ ಆಹುತಿಯಾಗಿವೆ. 5 ಮನೆಗಳು, 3 ದ್ವಿಚಕ್ರ ವಾಹನಗಳುಜಖಂಗೊಂಡಿವೆ. ಕಲ್ಲು ತಗುಲಿ 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಸ್‌ಪಿ ಕುಲದೀಪ್‌ಕುಮಾರ್‌ ಜೈನ್‌ ಮತ್ತು ಹೆಚ್ಚುವರಿ ಎಸ್ಪಿ ಮುತ್ತುರಾಜ್‌ ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

Write A Comment